`ಸತ್ಯವೇ ನನ್ನ ದೇವರು’ ಕಾನೂನು ಹೋರಾಟ ಮಾಡುತ್ತೇನೆ: ರಾಹುಲ್‌ ಟ್ವೀಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಸೂರತ್ ಕೋರ್ಟ್ ಶಿಕ್ಷೆ ವಿಧಿಸಿದೆ. ನ್ಯಾಯಾಲಯ ರಾಹುಲ್‌ಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದ್ದು, ಮೋದಿ ವಿರುದ್ಧ ದಾಖಲಾದ ಮಾನನಷ್ಟ ಮೊಕದ್ದಮೆಯಲ್ಲಿ ಗುಜರಾತ್‌ನ ಸೂರತ್ ಕೋರ್ಟ್ ಗುರುವಾರ ಈ ತೀರ್ಪು ನೀಡಿದೆ. ಇದೇ ವೇಳೆ ಕೋರ್ಟ್ ತೀರ್ಪಿನ ಬಳಿಕ ರಾಹುಲ್ ಪ್ರತಿಕ್ರಿಯಿಸಿದ್ದು, ‘ಸತ್ಯ ಮತ್ತು ಅಹಿಂಸೆಯೇ ನನ್ನ ಧರ್ಮ’ ಎಂದಿದ್ದಾರೆ. ತಮ್ಮ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಪ್ರತಿಕ್ರಿಯಿಸಿ, ”ನನ್ನ ಧರ್ಮ ಸತ್ಯ ಮತ್ತು ಅಹಿಂಸೆಯ ಮೇಲೆ ನಿಂತಿದೆ. ‘ಸತ್ಯವೇ ನನ್ನ ನಿಜವಾದ ದೇವರು, ಅದನ್ನು ಪಡೆಯಲು ಅಹಿಂಸೆಯೇ ದಾರಿ’ ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

2019 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕದ ಕೋಲಾರದಲ್ಲಿ ನಡೆದ ಸಭೆಯಲ್ಲಿ ರಾಹುಲ್ ಅವರು ಪ್ರಧಾನಿ ಮೋದಿಯವರ ಬಗ್ಗೆ ಕೆಲವು ಟೀಕೆಗಳನ್ನು ಮಾಡಿದರು. ಏಪ್ರಿಲ್ 13, 2019 ರಂದು, “ಲಲಿತ್ ಮೋದಿ, ನೀರವ್ ಮೋದಿ, ನರೇಂದ್ರ ಮೋದಿ ಕಳ್ಳರ ಹೆಸರೆಲ್ಲಾ ಮೋದಿ ಹೆಸರಿನಲ್ಲಿ ಇರೋದು ಯಾಕೆ” ಎಂದು ರಾಹುಲ್ ಕೇಳಿದ್ದರು. ಮೋದಿ ಬಗ್ಗೆ ರಾಹುಲ್‌ ಮಾಡಿರುವ ಟೀಕೆಗಳಿಗೆ ಗುಜರಾತ್ ಶಾಸಕ ಹಾಗೂ ಮಾಜಿ ಸಚಿವ ಪೂರ್ಣೇಶ್ ರಾಹುಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಇದರಿಂದಾಗಿ ರಾಹುಲ್ ವಿರುದ್ಧ ಸೆಕ್ಷನ್ 499 ಮತ್ತು ಸೆಕ್ಷನ್ 500 ಅಡಿಯಲ್ಲಿ ಪ್ರಕರಣಗಳು ದಾಖಲಾಗಿವೆ. ಸೂರತ್ ಜಿಲ್ಲಾ ನ್ಯಾಯಾಲಯದಲ್ಲಿ ನಾಲ್ಕು ವರ್ಷಗಳ ಕಾಲ ವಾದಗಳು ಮುಂದುವರಿದವು.

ಈ ಪ್ರಕರಣದ ವಿಚಾರಣೆಯ ಭಾಗವಾಗಿ, ರಾಹುಲ್ ಅಕ್ಟೋಬರ್ 2021 ರಲ್ಲಿ ನ್ಯಾಯಾಲಯಕ್ಕೆ ಹಾಜರಾಗಿ ತಮ್ಮ ಹೇಳಿಕೆಯನ್ನು ನೀಡಿದರು. ಈ ಪ್ರಕರಣದ ತನಿಖೆ ನಾಲ್ಕು ವರ್ಷಗಳ ಕಾಲ ನಡೆಯಿತು. ಕಳೆದ ವಾರ ಅಂತಿಮ ವಾದಗಳು ಮುಕ್ತಾಯಗೊಂಡಯ ನ್ಯಾಯಮೂರ್ತಿ ಎಚ್.ಎಚ್.ವರ್ಮಾ ಈ ಕುರಿತು ತೀರ್ಪು ಪ್ರಕಟಿಸಿದರು. ಈ ಪ್ರಕರಣದಲ್ಲಿ ರಾಹುಲ್ ಗಾಂಧಿ ತಪ್ಪಿತಸ್ಥ ಎಂದು ಕೋರ್ಟ್ ತೀರ್ಪು ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!