ಕರ್ನಾಟಕ ಪ್ರವೇಶಿಸಿದ ರಾಹುಲ್‌ ʼಭಾರತ್‌ ಜೋಡೋʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಕೇರಳದಿಂದ ಕರ್ನಾಟಕ ಪ್ರವೇಶಿಸಿದೆ. ಚಾಮರಾಜ ನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಗಾರಿ ಬಾರಿಸುವ ಮೂಲಕ ರಾಹುಲ್‌ ರಾಜ್ಯದಲ್ಲಿ ಯಾತ್ರೆಗೆ ಚಾಲನೆ ನೀಡಿದ್ದಾರೆ. ಇಂದಿನಿಂದ 21 ದಿನಗಳ ಕಾಲ ಕರ್ನಾಟಕದಲ್ಲಿ ಕಾಂಗ್ರೆಸ್ ನ ಭಾರತ ಐಕ್ಯತಾ ಯಾತ್ರೆ ಸಾಗಿಬರಲಿದೆ.

ರಾಹುಲ್ ಗಾಂಧಿ ಅವರನ್ನು ಗುಂಡ್ಲುಪೇಟೆಯ ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ನಡೆದ ಸ್ವಾಗತ ಕಾರ್ಯಕ್ರಮದಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಐಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಸೇರಿದಂತೆ ಹಲವು ನಾಯಕರು ಸ್ವಾಗತಿಸಿದರು.
ಸ್ವಾಗತ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಸಾಹಿತಿ ದೇವನೂರು ಮಹಾದೇವ ಅವರು ರಾಹುಲ್‌ ಗಾಂಧಿಗೆ ಸಂವಿಧಾನದ ಪೀಠಿಕೆಯ ಪ್ರತಿಯನ್ನು ನೀಡಿದ್ದು ವಿಶೇಷವಾಗಿತ್ತು.

ರಾಜ್ಯದಲ್ಲಿ ರಾಹುಕಾಲ ಆರಂಭ: ಬಿಜೆಪಿ ಲೇವಡಿ
ರಾಜ್ಯದಲ್ಲಿ ರಾಹುಲ್‌ ಗಾಂಧಿ ಯಾತ್ರೆ ಕುರಿತು ವ್ಯಂಗ್ಯವಾಡಿರುವ ಕರ್ನಾಟಕ ಬಿಜೆಪಿ, ʼಇಂದು ಬೆಳಗ್ಗೆ 10.30ಕ್ಕೆ ರಾಜ್ಯದಲ್ಲಿ ರಾಹುಕಾಲ ಆರಂಭವಾಗಿದೆ. ನಿಮ್ಮ ನೆಮ್ಮದಿ ಮತ್ತು ಶಾಂತಿಗಾಗಿ ರಾಹು ಸಂಬಂಧಿತ  ಕಾರ್ಯಕ್ರಮಗಳಿಂದ ಜನರು ಅಂತರ ಕಾಯ್ದುಕೊಳ್ಳಿʼ ಎಂದು ಟ್ವಿಟ್‌ ಮಾಡುವ ಮೂಲಕ ಬಿಜೆಪಿ ಕಾಂಗ್ರೆಸ್‌ ನಾಯಕನಿಗೆ ಟಾಂಗ್‌ ನೀಡಿದೆ.

ಜೊತೆಗೆ, ʼಭಯೋತ್ಪಾದಕರ ಬಗ್ಗೆ ಮೃದು ಧೊರಣೆ ಹೊಂದಿ, ದೇಶ ವಿಭಜಕರ ಜೊತೆ ಸಂಬಂಧ ಹೊಂದಿರುವ ರಾಹುಲ್‌ ಗಾಂಧಿ ಅವರಿಗೆ ಸ್ವಾಗತʼ ಎಂದು ಲೇವಡಿ ಮಾಡಿದೆ. 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!