ರಾಹುಲ್ ಎಂದರೆ ಭಾರತ, ಭಾರತ ಎಂದರೆ ರಾಹುಲ್: ಯುಪಿ ಕಾಂಗ್ರೆಸ್ ನೂತನ ಮುಖ್ಯಸ್ಥ ವಾಖ್ಯಾನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ʼಭಾರತ್ ಜೋಡೋʼ ಯಾತ್ರೆಯ ಬಗ್ಗೆ ಪ್ರತಿಕ್ರಿಸಿರುವ ಉತ್ತರ ಪ್ರದೇಶ ಪಕ್ಷದ ಕಾಂಗ್ರೆಸ್‌ನ ನೂತನ ಮುಖ್ಯಸ್ಥ ಬ್ರಿಜ್‌ಲಾಲ್ ಖಬ್ರಿ ಅವರು ರಾಹುಲ್ ಗಾಂಧಿಯನ್ನು “ರಾಹುಲ್ ಎಂದರೆ ಭಾರತ, ಭಾರತ ಎಂದರೆ ರಾಹುಲ್ʼ ಎಂದು ಹೇಳುವ ಮೂಲಕ ಶ್ಲಾಘಿಸಿದ್ದಾರೆ ಮತ್ತು ದೇಶ ಮತ್ತು ಸಂವಿಧಾನವನ್ನು ಉಳಿಸುವುದು ರಾಹುಲ್ ಗುರಿಯಾಗಿದೆ ಎಂದು ಹೇಳಿದ್ದಾರೆ.
ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಅವರ ಹೇಳಿಕೆಗಳು ಮಾಜಿ ಕಾಂಗ್ರೆಸ್ ಅಧ್ಯಕ್ಷ ದೇವ್ ಕಾಂತ್ ಬರೂಹ್ ಅವರ ಪ್ರಸಿದ್ಧವಾದ “ಇಂಡಿಯಾ ಈಸ್ ಇಂದಿರಾ, ಇಂದಿರಾ ಈಸ್ ಇಂಡಿಯಾ” ಹೇಳಿಕೆಯನ್ನು ನೆನಪಿಸುತ್ತದೆ, ಆದರೆ ಆ ಬಳಿಕ ಇದನ್ನು ಪಕ್ಷದ ಪ್ರತಿಸ್ಪರ್ಧಿಗಳು ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬವನ್ನು ಟೀಕಿಸಲು ಬಳಸುತ್ತಿದ್ದರು.
ರಾಜಕೀಯವಾಗಿ ನಿರ್ಣಾಯಕ ರಾಜ್ಯವಾದ ಉತ್ತರಪ್ರದೇಶದಲ್ಲಿ ಭಾರತ್ ಜೋಡೋ ಯಾತ್ರೆಯು ಕೇವಲ ಒಂದು ಜಿಲ್ಲೆಯ (ಬುಲಂದ್‌ಶಹರ್)ಲ್ಲಿ ಮಾತ್ರವೇಕೆ ಸಾಗುತ್ತದೆ ಎಂಬ ಪ್ರಶ್ನೆಗೆ ಖಬ್ರಿ ಅವರು, “ಭಾರತವು ಒಂದು ಜಿಲ್ಲೆ ಅಲ್ಲ ಅಥವಾ ರಾಜ್ಯವೂ ಅಲ್ಲ. ಇದು ರಾಜ್ಯಗಳ ಒಕ್ಕೂಟವಾಗಿದೆ. ಅವರು 13 ರಾಜ್ಯಗಳನ್ನು ಆವರಿಸಿಕೊಂಡು ಬರುವ ದೊಡ್ಡ ಗುರಿಯನ್ನು ಹೊಂದಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ. ಜೊತೆಗೆ, ದೇಶವನ್ನು ಮಾರಲು ಮತ್ತು ಸಂವಿಧಾನವನ್ನು ರದ್ದುಗೊಳಿಸಲು ಬಿಜೆಪಿ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಟೀಕಿಸಿದ್ದಾರೆ.
2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಯುಪಿಯ ಎಲ್ಲಾ 80 ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಕಾಂಗ್ರೆಸ್ ಹೊಂದಿದೆ ಎಂದು ಖಬ್ರಿ ಹೇಳಿದ್ದಾರೆ. ಪ್ರಸ್ತುತ ಸೋನಿಯಾ ಗಾಂಧಿ ಪ್ರತಿನಿಧಿಸುವ ರಾಯ್ ಬರೇಲಿ ಮತ್ತು ರಾಹುಲ್ ಪ್ರತಿನಿಧಿಸುವ ಅಮೇಥಿಯಲ್ಲಿ ಬಿಜೆಪಿ ಠೇವಣಿ ಕಳೆದುಕೊಳ್ಳಲಿದೆ ಎಂದು ಎಚ್ಚರಿಸಿದರು. 2019ರಲ್ಲಿ ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ಗಾಂಧಿ ಸೋತಿದ್ದರು. ಈ ಹಿಂದೆ ಬಿಎಸ್‌ಪಿಯಲ್ಲಿದ್ದ ಖಬ್ರಿ ಅವರನ್ನು ಇತ್ತೀಚೆಗಷ್ಟೇ ರಾಜ್ಯ ಕಾಂಗ್ರೆಸ್‌ ಮುಖ್ಯಸ್ಥರನ್ನಾಗಿ ನೇಮಿಸಲಾಗಿದ್ದು, ಶನಿವಾರ ಅವರು ಅಧಿಕಾರ ಸ್ವೀಕರಿಸಿದ್ದಾರೆ.
ರಾಹುಲ್ ಗಾಂಧಿ ದೇಶವನ್ನು ಒಗ್ಗೂಡಿಸುತ್ತಿರುವ ವಿಚಾರ ಬಿಜೆಪಿಯನ್ನು ದಂಗುಬಡಿಸಿದೆ, ಇದು ಅವರ ಬ್ರೆಡ್ ಮತ್ತು ಬೆಣ್ಣೆಯನ್ನು ಕಸಿದುಕೊಳ್ಳುತ್ತಿದೆ ಎಂದು ಅವರು ಖಬ್ರಿ ವ್ಯಂಗ್ಯವಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!