ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯಎರಡೂ ಇನ್ನಿಂಗ್ಸ್ನಲ್ಲೂ ಭಾರತ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿದೆ.ಕೆಎಲ್ ರಾಹುಲ್ ಹಾಗೂ ಉಪನಾಯಕ ರಿಷಭ್ ಪಂತ್ ಆಂಗ್ಲ ಬೌಲರ್ಗಳನ್ನ ಚೆಂಡಾಡಿ ಇಬ್ಬರು ಶತಕ ಸಿಡಿಸಿದರು.
ಭಾರತ ತಂಡ 364 ರನ್ಗಳಿಗೆ ಆಲೌಟ್ ಆಗುವ ಮೂಲಕ ಇಂಗ್ಲೆಂಡ್ ರನ್‌ಗಳ 371 ಬೃಹತ್ ಗುರಿ ನೀಡಿದೆ.
ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 471 ರನ್ ಗಳಿಸಿದರೆ, ಇಂಗ್ಲೆಂಡ್ 465 ರನ್ ಗಳಿಸಿತು. ಭಾರತ ಕೇವಲ 6 ರನ್‌ಗಳ ಮುನ್ನಡೆ ಸಾಧಿಸಿತ್ತು. ಇದೀಗ 2ನೇ ಇನ್ನಿಂಗ್ಸ್‌ನಲ್ಲಿ ರಾಹುಲ್ ಹಾಗೂ ರಿಷಭ್ ಪಂತ್ ಶತಕದ 195 ರನ್‌ಗಳ ಜೊತೆಯಾಟ ನೀಡಿ ಸವಾಲಿನ ಗುರಿ ನೀಡಲು ನೆರವಾದರು.