CINEMA| ವಾಹ್! ಆಸ್ಕರ್ ವೇದಿಕೆಯಲ್ಲಿ `ನಾಟು ನಾಟು’ ಲೈವ್‌ ಪರ್ಫಾಮೆನ್ಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜಮೌಳಿಯವರ RRR ಚಿತ್ರ ಈಗ ಆಕಾಶದ ತುದಿಯನ್ನು ತಲುಪುತ್ತಿದೆ. ಸ್ವಾತಂತ್ರ್ಯ ಪೂರ್ವದ ಕಥಾವಸ್ತುವಿರುವ ಈ ಚಿತ್ರದಲ್ಲಿ ರಾಮ್ ಚರಣ್ – ಅಲ್ಲೂರಿ ಸೀತಾರಾಮರಾಜು ಮತ್ತು ಎನ್ ಟಿಆರ್ – ಕೊಮರಂ ಭೀಮನಾಗಿ ನಟಿಸಿದ್ದಾರೆ. ಸಿನಿಮಾ ಬಿಡುಗಡೆಯಾಗಿ ವರ್ಷ ಕಳೆದರೂ ಸಿನಿಮಾ ಮೇನಿಯಾ ಇನ್ನೂ ಮುಂದುವರೆದಿದೆ. ವಿಶ್ವಾದ್ಯಂತ ಹಲವು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಸ್ಥಾನ ಪಡೆಯುವುದರ ಜೊತೆಗೆ ಪ್ರಶಸ್ತಿಗಳನ್ನೂ ಗೆದ್ದು ಭಾರತೀಯ ಸಿನಿಮಾವನ್ನು ಜಗತ್ತಿನ ದೇಶಗಳಿಗೆ ಪರಿಚಯಿಸುತ್ತಿದೆ.

ಬೇರೆ ದೇಶಗಳಲ್ಲೂ ಈ ಸಿನಿಮಾ ಭಾರೀ ಜನಪ್ರಿಯತೆ ಗಳಿಸಲು ‘ನಾಟು ನಾಟು’ ಹಾಡು ಮುಖ್ಯ ಕಾರಣ. ದಕ್ಷಿಣ ಭಾರತದ ಮಾಸ್ ಹಾಡು ಇಡೀ ಜಗತ್ತನ್ನು ಆಕರ್ಷಿಸುತ್ತದೆ ಎಂದು ಯಾರೂ ಕನಸು ಕಂಡಿರಲಿಲ್ಲ. ಎಂಎಂ ಕೀರವಾಣಿ ಈ ಹಾಡಿಗೆ ಸಂಗೀತ ನೀಡಿದ್ದಾರೆ. ಚಂದ್ರ ಬೋಸ್ ಸಾಹಿತ್ಯ ನೀಡಿದ್ದು, ರಾಹುಲ್ ಸಿಪ್ಲಿಗಂಜ್ ಮತ್ತು ಕಾಲ ಭೈರವ ಹಾಡನ್ನು ಹಾಡಿದ್ದಾರೆ. ಈಗಾಗಲೇ ಹಲವು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವ ಈ ಹಾಡು ಆಸ್ಕರ್ ಪ್ರಶಸ್ತಿಗೂ ನಾಮಿನೇಟ್ ಆಗಿರುವುದು ಗೊತ್ತೇ ಇದೆ. ಆಸ್ಕರ್ ಅವಾರ್ಡ್ ಫಂಕ್ಷನ್ ದಿನದಂದು ಈ ಹಾಡಿಗೆ ಲೈವ್ ಪರ್ಫಾರ್ಮೆನ್ಸ್ ನೀಡಲಾಗುವುದು.

ಮಾರ್ಚ್ 12 ರಂದು ನಡೆಯಲಿರುವ 95 ನೇ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ರಾಹುಲ್ ಸಿಪ್ಲಿಗಂಜ್ ಮತ್ತು ಕಾಲ ಭೈರವ ನಾಟು ಹಾಡಿನ ನೇರ ಪ್ರದರ್ಶನವನ್ನು ನೀಡಲಿದ್ದಾರೆ ಎಂದು ಅಕಾಡೆಮಿ ಅಧಿಕೃತವಾಗಿ ತಮ್ಮ ಸಾಮಾಜಿಕ ವೇದಿಕೆಯ ಹ್ಯಾಂಡಲ್ ಮೂಲಕ ಘೋಷಿಸಿದೆ. ಇಂದು (ಮಾರ್ಚ್ 1) ಲಾಸ್ ಏಂಜಲೀಸ್‌ನಲ್ಲಿ RRR ಸ್ಕ್ರೀನಿಂಗ್ ಅನ್ನು 1647 ಆಸನಗಳ ದೊಡ್ಡ ಸಾಮರ್ಥ್ಯವನ್ನು ಹೊಂದಿರುವ ಏಸ್ ಹೋಟೆಲ್ ಥಿಯೇಟರ್‌ನಲ್ಲಿ ನಡೆಯಲಿದೆ. ಈ ಪ್ರದರ್ಶನಕ್ಕೆ ರಾಜಮೌಳಿ, ಕೀರವಾಣಿ ಮತ್ತು ರಾಮ್ ಚರಣ್ ಹಾಜರಾಗಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!