ಅಕ್ರಮ ಕಾರ್ಖಾನೆಯ ಮೇಲೆ ದಾಳಿ: 1000 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಗುಜರಾತ್​ ನ ಭರೂಚ್​​ ಜಿಲ್ಲೆಯ ಅಂಕಲೇಶ್ವರ ಪ್ರದೇಶದಲ್ಲಿದ್ದ ಅಕ್ರಮ ಡ್ರಗ್ಸ್ ಕಾರ್ಖಾನೆಯ ಮೇಲೆ ಎಟಿಎಸ್ ಪೊಲೀಸರು​​ ದಾಳಿ ನಡೆಸಿದ್ದು, 513 ಕೆಜಿ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ. ಇದರ ಮೌಲ್ಯ ಅಂದಾಜು 1,026 ಕೋಟಿ ರೂಪಾಯಿ ಎಂದು ತಿಳಿದು ಬಂದಿದೆ.
ಓರ್ವ ಮಹಿಳೆ ಸೇರಿದಂತೆ 7 ಆರೋಪಿಗಳನ್ನು ಬಂಧಿಸಲಾಗಿದೆ.
ವಡೋದರಾ ಗ್ರಾಮಾಂತರ ಸಾವಲಿ ತಾಲೂಕಿನ ಮೋಕ್ಸಿ ಎಂಬಲ್ಲಿ ನೆಕ್ಟರ್ ಕೆಮ್​ ರಾಸಾಯನಿಕ ಕಾರ್ಖಾನೆ ಕಾರ್ಯನಿರ್ವಹಿಸುತ್ತಿದೆ. ಈ ಕಾರ್ಖಾನೆಯಲ್ಲಿ ಸ್ಥಳೀಯರಿಗೆ ಉದ್ಯೋಗ ದೊರೆಯುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ, ರಾಸಾಯನಿಕಗಳ ಬದಲಿಗೆ ಜನರನ್ನು ನಾಶ ಮಾಡುವ ಡ್ರಗ್ಸ್​​​​ ತಯಾರು ಮಾಡಲಾಗ್ತಿತ್ತು.
ಕಾರ್ಖಾನೆಯಲ್ಲಿ ಕೆಲ ಪ್ರಭಾವಿ ವ್ಯಕ್ತಿಗಳು ಶಾಮೀಲಾಗಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಡ್ರಗ್ಸ್​ ತಯಾರಿಕೆಗೆ ಕಚ್ಚಾವಸ್ತು ಎಲ್ಲಿಂದ ಬರುತ್ತಿತ್ತು? ಡ್ರಗ್ಸ್‌ ಎಲ್ಲಿಗೆ ರವಾನೆಯಾಗ್ತಿತ್ತು? ಎಂಬುದರ ಬಗ್ಗೆ ಪೊಲೀಸರು ಕೂಲಂಕಷ ತನಿಖೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!