spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನಿಖಿಲ್ ನಟನೆಯ ಬಹುನಿರೀಕ್ಷಿತ ‘ರೈಡರ್’ ಚಿತ್ರದ ರಿಲೀಸ್ ಡೇಟ್ ಪ್ರಕಟ

- Advertisement -Nitte

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿಖಿಲ್ ಕುಮಾರಸ್ವಾಮಿ ಅಭಿನಯಿಸಿರುವ ಚಿತ್ರ ರೈಡರ್ ನ ರಿಲೀಸ್ ಡೇಟ್ ಘೋಷಣೆಯಾಗಿದೆ.
ಇದೇ ಡಿಸೆಂಬರ್ 24ರಂದು ರೈಡರ್ ಮೂಲಕ ನಿಖಿಲ್ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಕ್ಕೆ ವಿಜಯ್ ಕುಮಾರ್ ಕೊಂಡ ನಿರ್ದೇಶನ ಮಾಡಿದ್ದು, ಸುನಿಲ್ ಗೌಡ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಸಿನಿಮಾ ಕೆಲಸಗಳು ಮುಗಿದಿದ್ದರೇ ಇದೇ ತಿಂಗಳು ರೈಡರ್ ರಿಲೀಸ್ ಆಗಬೇಕಿತ್ತು. ಆದರೆ ಇದೀಗ ಕ್ರಿಸ್ ಮಸ್ ನಿಮಿತ್ತ ಡಿಸೆಂಬರ್ ನಲ್ಲಿ ಸಿನಿಮಾ ತೆರೆಗೆ ಬರಲಿದೆ.
ಈ ಚಿತ್ರದಲ್ಲಿ ನಿಖಿಲ್ ಜೋಡಿಯಾಗಿ ಕಾಶ್ಮೀರ ಪರ್ದೇಸಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಸಿನಿಮಾದ ಹಾಡು ಸಖತ್ ಹಿಟ್ ಆಗಿದೆ.
ಈ ಸಿನಿಮಾದಲ್ಲಿ ಮಂಜು ಪಾವಗಡ, ಗರುಡ ರಾಮ್, ಶಿವರಾಜ್ ಕೆ.ಆರ್.ಪೇಟೆ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.
ಈ ಬಗ್ಗೆ ಕೂ ಆಪ್ ನಲ್ಲಿ ಪೋಸ್ಟರ್ ರಿಲೀಸ್ ಮಾಡಿದ ನಿಖಿಲ್, ನಿಮ್ಮೆಲ್ಲರ ಕುತೂಹಲಕ್ಕೆ ತೆರೆಬಿದ್ದಿದೆ. ರೈಡರ್ ಚಿತ್ರ ಡಿಸೆಂಬರ್ 24ಕ್ಕೆ ತೆರೆಕಾಣಲಿದ್ದು, ಸಿನಿಮಾವನ್ನು ಚಿತ್ರಮಂದಿರದಲ್ಲೇ ವೀಕ್ಷಿಸಿ ನಮ್ಮ ತಂಡಕ್ಕೆ ಆಶೀರ್ವದಿಸಿ ಎಂದು ಬರೆದುಕೊಂಡಿದ್ದಾರೆ

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss