Wednesday, July 6, 2022

Latest Posts

ರೈಲ್ವೆ ಬ್ಲಾಸ್ಟ್ ಮಾಡುವುದಾಗಿ ಬಂತು ಹುಸಿ ಬೆದರಿಕೆ

ಹೊಸದಿಗಂತ ವರದಿ,ಕಲಬುರಗಿ:

ಕಿರಿಯ ಸಹೋದರನಿಗೆ ದಂಡ ಹಾಕಿದ್ದಕ್ಕೆ ರೊಚ್ಚಿಗೆದ್ದ ಆತನ ಸಹೋದರನೊಬ್ಬ ಕೆಕೆ ಎಕ್ಸ್‍ಪ್ರೆಸ್ ರೈಲ್ವೆ ಬ್ಲಾಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಡಿ ರೈಲ್ವೆ ಪೊಲೀಸರು ಓರ್ವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ದೆಹಲಿ ಮೂಲದ ಸತ್ಯ ಎಂಬುವವರು ರೈಲ್ವೆಗೆ ಬ್ಲಾಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ ಭೂಪನಾಗಿದ್ದಾನೆ.
ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ಪ್ರಯಾಣಿಕನೊಬ್ಬನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ವಿಚಾರಣೆ ವೇಳೆ ಕುಡುಕ ಸಹೋದರನ ಕಿತಾಪತಿ ಎನ್ನುವುದು ಬಯಲಾಗಿದೆ.
ನಂತರ ಯುವಕನಿಗೆ ಬೇರೊಂದು ರೈಲಿನಲ್ಲಿ ಬೆಂಗಳೂರಿಗೆ ಕಳುಹಿಸಿದ್ದಾರೆ ಎಂದು ಹೇಳಲಾಗಿದೆ.
ದೆಹಲಿಯಿಂದ ಬೆಂಗಳೂರಿಗೆ ಬರುವ ಕರ್ನಾಟಕ ರೈಲ್ವೆ ಎಕ್ಸ್‍ಪ್ರೆಸ್ (ಕೆಕೆ) ರೈಲ್ವೆಗೆ ಬೆದರಿಕೆ ಹಾಕಿದಲ್ಲದೆ, ಆತನ ತಮ್ಮನ ಸಹ ಇದೇ ರೈಲ್ವಿನಲ್ಲಿ ಪ್ರಯಾಣಿಸುತ್ತಿದ್ದ ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss