Friday, August 19, 2022

Latest Posts

ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್: ಹಳಿ ಮೇಲೆಯೇ ಇನ್ನು ಸಿಗುತ್ತೆ ಸಿನಿಮಾ, ಸಂಗೀತ, ನ್ಯೂಸ್!

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ರೈಲುಗಳಲ್ಲಿ ಇನ್ಮುಂದೆ ಪ್ರಯಾಣಿಕರಿಗೆ ಬೇಡಿಕೆಯ ಅನುಸಾರ ಚಲನಚಿತ್ರ, ಸುದ್ದಿ, ವಿಡಿಯೋಗಳನ್ನು ವಿವಿಧ ಭಾಷೆಗಳಲ್ಲಿ ಪ್ರದರ್ಶಿಸಲು ಇಲಾಖೆ ಚಿಂತನೆ ನಡೆಸಿದೆ.
ಈ ಕುರಿತು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಸಂಗೀತ, ಸಿನಿಮಾ, ಸಾಮಾನ್ಯ ಮನರಂಜನೆ, ಸುದ್ದಿ ಸೇರಿದಂತೆ ವಿವಿಧ ಭಾಷೆಗಳ ವಿಡಿಯೋಗಳನ್ನು ರೈಲುಗಳಲ್ಲಿ ಪ್ರದರ್ಶಿಸಲಾಗುವುದು ಎಂದು ಹೇಳಿದ್ದಾರೆ.
ಮೀಡಿಯಾ ಸರ್ವರ್ ಗಳನ್ನು ಬೋಗಿಗಳ ಒಳಗೆ ಇರಿಸಲಾಗುವುದು ಈ ಮೂಲಕ ಪ್ರಯಾಣಿಕರಿಗೆ ಮನರಂಜನೆ ಸಿಗಲಿದೆ ಎಂದು ರೈಲ್ವೆ ಸಿಎಂಡಿ ಪುನೀತ್ ಚಾವ್ಲಾ ತಿಳಿಸಿದ್ದಾರೆ. ಈ ಸೇವೆಯನ್ನು 5723 ಉಪನಗರ ರೈಲುಗಳು, 5952 ಹೆಚ್ಚು ವೈಫೈ ಸೌಲಭ್ಯ ಹೊಂದಿದ ರೈಲು ನಿಲ್ದಾಣಗಳು ಸೇರಿದಂತೆ 8731 ರೈಲುಗಳಲ್ಲಿ ಒದಗಿಸಲಾಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!