ರೈಲ್ವೇ ಪೋಲೀಸರ ಕಾರ್ಯಾಚರಣೆ: ಪ್ರಯಾಣಿಕನ ಬಳಿಯಿದ್ದ 2ಕೆಜಿ ಚಿನ್ನ 100 ಕೆಜಿ ಬೆಳ್ಳಿ ವಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ರೈಲಿನಲ್ಲಿ ಚಿನ್ನ ಹಾಗೂ ಬೆಳ್ಳಿಯನ್ನು ಕಳ್ಳಸಾಗಣೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ರೇಲ್ವೇ ಪೋಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಅಕೋಲಾ ರೈಲು ನಿಲ್ದಾಣದಲ್ಲಿ ಶುಕ್ರವಾರ ಬೆಳಗ್ಗೆ ಮುಂಬೈ-ಹೌರಾ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಈ ಕುಕೃತ್ಯದಲ್ಲಿ ಭಾಗಿಯಾಗಿದ್ದ.

ಭಾರೀ ಚೀಲವನ್ನು ಹೊತ್ತಿದ್ದ ಈ ವ್ಯಕ್ತಿಯ ವರ್ತನೆ ಕಂಡು ಅನುಮಾನಗೊಂಡ ಪೋಲೀಸರು ತಪಾಸಣೆ ಮಾಡಲಕು ನಿರ್ಧರಿಸಿ ಆತನ ಬಳಿ ಚೀಲವನ್ನು ಬಿಚ್ಚಲು ಹೇಳಿದ್ದಾರೆ. ಆತ ನಿರಾಕರಿಸಿದ್ದಾನೆ. ತಕ್ಷಣವೇ ಆತನನ್ನು ಆರ್‌ಪಿಎಫ್ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.

ಆ ವ್ಯಕ್ತಿ ತಾನು ಅಕೋಲಾ ಮೂಲದ ಕೊರಿಯರ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೆ ಮತ್ತು ಬ್ಯಾಗ್‌ನಲ್ಲಿ ಪಾರ್ಸೆಲ್ ಇತ್ತು ಎಂದು ಹೇಳಿದ್ದಾನೆ. ಆರ್‌ಪಿಎಫ್ ಅಧಿಕಾರಿಗಳು ಹುಡುಕಾಟ ನಡೆಸಿದಾಗ ಅದರೊಳಗೆ 100 ಕೆಜಿ ಬೆಳ್ಳಿ ಬಿಸ್ಕತ್‌ಗಳು ಮತ್ತು ಎರಡು ಕೆಜಿ ಚಿನ್ನ ಬಾರ್‌ಗಳ ರೂಪದಲ್ಲಿ ಪತ್ತೆಯಾಗಿದೆ.

ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!