Tuesday, June 28, 2022

Latest Posts

ರೈಲ್ವೆ ಹಳಿ, ರಸ್ತೆ ಮೇಲೆ ಚಲಿಸುವ ವಿಶ್ವದ ಮೊದಲ ದ್ವಿಮಾದರಿ ವಾಹನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರೈಲ್ವೆ ಹಳಿ ಮತ್ತು ರಸ್ತೆ, ಎರಡರ ಮೇಲೂ ಸಂಚರಿಸಬಲ್ಲ ವಾಹನವನ್ನು ಜಪಾನ್ ಪರಿಚಯಿಸಿದೆ.
ಈ ರೀತಿ ದ್ವಿಮಾದರಿಯ ವಾಹನ ವಿಶ್ವದಲ್ಲಿ ಇದೇ ಮೊದಲನೆಯದ್ದಾಗಿದೆ.
ನೋಡಲು ಮಿನಿ ಬಸ್‌ನಂತೆ ಕಾಣುವ ಈ ವಾಹನ ರಸ್ತೆ ಹಾಗೂ ರೈಲ್ವೆ ಹಳಿ ಎರಡರ ಮೇಲೂ ಸಂಚರಿಸುವ ಫೀಚರ‍್ಸ್ ಹೊಂದಿದೆ. ರಸ್ತೆಗಾಗಿ ರಬ್ಬರ್ ಟೈರ‍್ಸ್ ಹಾಗೂ ರೈಲ್ವೆ ಹಳಿಗಳಿಗಾಗಿ ಉಕ್ಕಿನ ಚಕ್ರಗಳನ್ನು ಅಳವಡಿಸಲಾಗಿದೆ.

ರೈಲು ಹಳಿಗಳ ಮೇಲೆ ವಾಹನ ಬರುತ್ತಿದ್ದಂತೆಯೇ ಉಕ್ಕಿನ ಚಕ್ರಗಳು ಕೆಳಗಿಳಿಯುತ್ತವೆ. ವರದಿಗಳ ಅನ್ವಯ ಈ ವಾಹನದಲ್ಲಿ ಸುಮಾರು 21 ಮಂದಿ ಕೂರಲು ಸ್ಥಳಾವಕಾಶ ಇದೆ. ಹಳಿ ಮೇಲೆ ಗಂಟೆಗೆ 60 ಕಿ.ಮೀ ವೇಗ, ರಸ್ತೆ ಮೇಲೆ ಗಂಟೆಗೆ 100 ಕಿ.ಮೀ ವೇಗದಲ್ಲಿ ಈ ವಾಹನ ಸಂಚರಿಸಲಿದೆ. ಸಣ್ಣ ಪಟ್ಟಣಗಳಿಗೆ ಈ ವಾಹನ ಸೂಕ್ತವಾಗಿದ್ದು, ಡಿಸೇಲ್‌ನಿಂದ ಇವು ಚಲಿಸುತ್ತವೆ. ಆಕರ್ಷಕವಾದ ಕಡಲ ತೀರಗಳನ್ನು ನೋಡಲು ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss