Tuesday, June 28, 2022

Latest Posts

ಯಾವುದೇ ಕಾರಣಕ್ಕೂ ರೈಲ್ವೆ ಸೇವೆ ಸ್ಥಗಿತ ಇಲ್ಲ: ರೈಲ್ವೆ ಇಲಾಖೆ ಸ್ಪಷ್ಟನೆ

ಹೊಸದಿಗಂತ ಆನ್‌ಲೈನ್ ಡೆಸ್ಕ್:

ರೈಲ್ವೆ ಸೇವೆಗಳನ್ನು ಕಡಿತಗೊಳಿಸುವ ಅಥವಾ ನಿಲ್ಲಿಸುವ ಯೋಜನೆ ಇಲ್ಲ ಎಂದು ರೈಲ್ವೆ ಮಂಡಳಿ ಸ್ಪಷ್ಟಪಡಿಸಿದೆ.
ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಮರಳುತ್ತಿರುವಾಗ ಪ್ರಯಾಣ ದಟ್ಟಣೆ ತಗ್ಗಿಸಲು ಪ್ರಯಾಣಿಕರಿಂದ ಬೇಡಿಕೆ ಬಂದರೆ ಮತ್ತಷ್ಟು ರೈಲುಗಳ ಸೇವೆ ಒದಗಿಸಲಾಗುವುದು ಎಂದು ಹೇಳಿದೆ.
ರೈಲುಗಳ ಕೊರತೆ ಇಲ್ಲ. ಪ್ರಯಾಣಿಕರ ಅಗತ್ಯಕ್ಕೆ ತಕ್ಕಷ್ಟು ರೈಲುಗಳ ಸೇವೆ ಒದಗಿಸಲು ನಾವು ಸಿದ್ಧ. ಬೇಸಿಗೆಯಲ್ಲಿ ರಜೆಗಳು ಹೆಚ್ಚಿರುವುದರಿಂದ ಹೆಚ್ಚು ಮಂದಿ ರೈಲ್ವೆ ಸೇವೆ ಬಳಸುತ್ತಾರೆ. ಇದಕ್ಕಾಗಿ ಅಗತ್ಯ ಕ್ರಮ ಕೈಗೊಂಡಿದ್ದೇವೆ ಎಂದು ರೈಲ್ವೆ ಮಂಡಳಿಯ ಅಧ್ಯಕ್ಷ ಸುನೀತ್ ಶರ್ಮಾ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss