ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ವರದಿ, ಶಿವಮೊಗ್ಗ:
ಜಿಲ್ಲೆಯಲ್ಲಿ ಶನಿವಾರ ಸ್ವಲ್ಪ ಬಿಡುವು ನೀಡಿದ್ದ ಮಳೆ ಭಾನುವಾರ ಮುಂಜಾನೆಯಿಂದ ನಿರಂತರವಾಗಿ ಸುರಿಯುತ್ತಿದ್ದು, ನದಿ, ಹಳ್ಳಗಳು ಮತ್ತೊಮ್ಮೆ ತುಂಬಿ ಹರಿಯಲಾರಂಭಿಸಿವೆ.
ಬೆಳಗಿನಜಾವದಿಂದಲೇ ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ಜನಜೀವನ ಸ್ತಬ್ದವಾಗಿದೆ. ಒಳಹರಿವು ಕಡಿಮೆಯಾಗಿದ್ದ ತುಂಗಾ, ಶರಾವತಿ, ವರದ, ಕುಮದ್ವತಿ ಮೊದಲಾದ ನದಿಗಳಲ್ಲಿ ನೀರಿನ ಹರಿವು ಕ್ರಮೇಣ ಹೆಚ್ಚಾಗುತ್ತಿದೆ. ಗದ್ದೆಗಳು ಜಲಾವೃತವಾಗುವಂತಾಗಿದೆ. ಮಳೆ ಆಶ್ರಿತ ಪ್ರದೇಶಗಳಲ್ಲಿ ಭತ್ತದ ನಾಟಿಗೆ ರೈತರು ತಯಾರಿ ನಡೆಸುತ್ತಿದ್ದು, ನಿರಂತರ ಮಳೆ ಕೆಲಸಕ್ಕೆ ಅಡ್ಡಿಯಾಗಿದೆ.
ಶರಾವತಿಯಲ್ಲಿ 22, 950 ಕ್ಯೂಸೆಕ್ಸ್, ತುಂಗಾ 20,324 ಕ್ಯೂಸೆಕ್ಸ್ ಹಾಗೂ ಭದ್ರಾದಲ್ಲಿ 10,072 ಕ್ಯೂಸೆಕ್ಸ್ ಒಳಹರಿವಿದೆ.
ಲಿಂಗನಮಕ್ಕಿ ಜಲಾಶಯ ಇಂದಿನ 1791 ಅಡಿ, ಭದ್ರಾ ಜಲಾಶಯಕ್ಕೆ 163 ಅಡಿ ನೀರು ಬಂದಿದೆ.