Thursday, August 18, 2022

Latest Posts

ಮಧ್ಯಾಹ್ನದ ಮೇಲೆ ಹೆಚ್ಚಾಗಲಿದೆ ಮಳೆ ಅಬ್ಬರ, ಯಾವ ಊರಿನಲ್ಲಿ ಮಳೆ?

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ರಾಜ್ಯಾದ್ಯಂತ ಅಲ್ಲಲ್ಲಿ ಮಳೆಯಾಗುತ್ತಿದ್ದು, ನಾಳೆ ಬೆಳಗ್ಗೆ 8 ಗಂಟೆವರೆಗಿನ ಹವಾಮಾನ ವರದಿ ಇಲ್ಲಿದೆ.. ದಕ್ಷಿಣ, ಉಡುಪಿ,ಉತ್ತರ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆ. (ಮಧ್ಯಾಹ್ನ ಮೇಲೆ ಇರಬಹುದು).

ಕೊಡಗು, ಮೈಸೂರು, ಚಾಮರಾಜನಗರ, ರಾಮನಗರ, ಮಂಡ್ಯ, ಸಕ್ಲೇಶ್ಪುರ ಸುತ್ತಮುತ್ತ, ಚಿಕ್ಕಮಗಳೂರು, ದಾವಣಗೆರೆ, ಶಿವಮೊಗ್ಗ, ಹಾವೇರಿ, ಧಾರವಾಡ, ಬೆಳಗಾವಿ, ಯಾದಗಿರಿ, ಬಿಜಾಪುರ, ಬೀದರ್, ಗುಲ್ಬರ್ಗ ಜಿಲ್ಲಾ ಹೆಚ್ಚಿನ ಭಾಗಗಳಲ್ಲಿ ಸಹ ಮಳೆಯ ಮುನ್ಸೂಚನೆ ಇದೆ.

ಉಳಿದ ಕರ್ನಾಟಕದ ಭಾಗಗಳಲ್ಲಿ ಮೋಡ ಅಥವಾ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇದೆ. ಮುಂಗಾರು : ಹವಾಮಾನ ಇಲಾಖೆ ಮುನ್ಸೂಚನೆಯಷ್ಟು ಪ್ರಮಾಣದ ಮಳೆಯಾಗುತ್ತಿಲ್ಲ. ಮುಂಗಾರು ಹೇಳಿಕೊಳ್ಳುವಷ್ಟು ಪ್ರಭಲವಾಗಿಲ್ಲ.

ಹವಾಮಾನ ಮಾಹಿತಿ: ಸಾಯಿಶೇಖರ್ ಕರಿಕ್ಕಳ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!