Wednesday, August 17, 2022

Latest Posts

ಅಕ್ಟೋಬರ್​ 25ರವರೆಗೂ ಕೇರಳದಲ್ಲಿ ಮಳೆ: 8 ಜಿಲ್ಲೆಗಳಲ್ಲಿ ಆರೆಂಜ್​ ಅಲರ್ಟ್​​

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೇರಳದಲ್ಲಿ ಹಲವು ಜಿಲ್ಲೆಗಳಲ್ಲಿ ಅಕ್ಟೋಬರ್​ 25ರವರೆಗೂ ಮಳೆಯಾಗಲಿದ್ದು, ಹವಾಮಾನ ಇಲಾಖೆ ಆರೆಂಜ್​ ಮತ್ತು ಯೆಲ್ಲೋ ಅಲರ್ಟ್​​ ಘೋಷಿಸಿದೆ.
ಕೊಟ್ಟಾಯಂ, ಇಡುಕ್ಕಿ, ಪಲಕ್ಕಾಡ್​​, ಮಲಪ್ಪುರಂ, ಕೊಯಿಕ್ಕೊಡ್​, ವಯಾನಾಡ್​ ಮತ್ತು ಕಣ್ಣೂರು, ಪಥನಂತಿಟ್ಟ ಜಿಲ್ಲೆಗಳಲ್ಲಿ ಆರೆಂಜ್​ ಅಲರ್ಟ್​ ಹೇರಲಾಗಿದ್ದು, ತಿರುವನಂತಪುರಂ, ಕೊಲ್ಲಂ, ಆಲಪ್ಪುಳ, ಎರ್ನಾಕುಲಂ, ತ್ರಿಶೂರ್ ಮತ್ತು ಕಾಸರಗೋಡು ಜಿಲ್ಲೆಗಳಿಗೆ ಹಳದಿ ಎಚ್ಚರಿಕೆ ನೀಡಲಾಗಿದೆ. ಆರೆಂಜ್​ ಅಲರ್ಟ್​ ಎಂದರೆ 6 ಸಿಎಂನಿಂದ 20 ಸಿಎಂನವರೆಗೆ ಮಳೆಯಾಗಬಹುದು ಎಂಬ ಎಚ್ಚರಿಕೆಯಾಗಿದೆ. ಹಾಗೇ ಹಳದಿ ಅಲರ್ಟ್​ ಎಂದರೆ 6ಸಿಎಂನಿಂದ 11 ಸಿಎಂವರೆಗೆ ಮಳೆಯಾಗಬಹುದು ಎಂಬ ಮುನ್ಸೂಚನೆಯಾಗಿದೆ.
ಸದ್ಯ ಕೇರಳದಲ್ಲಿ ನೈಋತ್ಯ ಮಾನ್ಸೂನ್​ ಸಕ್ರಿಯವಾಗಿದೆ. ಹೀಗಾಗಿ ಕೇರಳದ ಬಹುತೇಕ ಪ್ರದೇಶಗಳಲ್ಲಿ ಮತ್ತು ಲಕ್ಷದ್ವೀಪದ ವಿವಿಧ ಕಡೆಗಳಲ್ಲಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮೀನುಗಾರರಿಗೆ ಸಮುದ್ರಕ್ಕೆ ಇಳಿಯಬಾರದೆಂದು ಸೂಚಿಸಲಾಗಿದೆ. ಇಂದಿನಿಂದ ಅಕ್ಟೋಬರ್​ 25ರವರೆಗೂ ಕೂಡ ಕೇರಳ, ಮಾಹೆ, ತಮಿಳುನಾಡು, ಪುದುಚೇರಿ ಮತ್ತು ಕರೈಕಲ್​​ಗಳಲ್ಲಿ ಗುಡುಗು-ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!