ಭಾಳಾ ಠಾಕ್ರೆ ಲೌಡ್ ಸ್ಪೀಕರ್ ಬಗ್ಗೆ ಹೇಳಿದ್ದ ಮಾತು- ರಾಜ್ ಠಾಕ್ರೆ ಹಂಚಿಕೊಂಡಿರುವ ವಿಡಿಯೊ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಶಿವಸೇನೆಯು ಹನುಮಾನ್‌ ಚಾಲೀಸಾವನ್ನು ನಿಷೇಧಿಸಿರುವ ಬೆನ್ನಲ್ಲೇ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ರಾಜ್‌ ಠಾಕ್ರೆ ಶಿವ ಸೇನೆಯ ಸಂಸ್ಥಾಪಕ ಭಾಳಾ ಠಾಕ್ರೆಯವರು ಸ್ಪೀಕರ್ ಬಗ್ಗೆ ಮಾತನಾಡಿರುವ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಅವರು ಹಂಚಿಕೊಂಡಿರುವ ಈ ವೀಡಿಯೋದಲ್ಲಿ ಶಿವಸೇನೆಯ ಸಂಸ್ಥಾಪಕ ಭಾಳಾಠಾಕ್ರೆಯವರು “ರಸ್ತೆಗಳಲ್ಲಿ ನಮಾಜ್‌ ಮಾಡುವುದನ್ನು ತಡೆಯುವವರೆಗೂ ನಾವು (ಶಿವಸೇನೆ) ನಿಲ್ಲುವುದಿಲ್ಲ. ಹಿಂದೂ ಧರ್ಮಕ್ಕೆ ತೊಂದರೆಯಾಗುವುದನ್ನು ಸಹಿಸುವುದಿಲ್ಲ. ಯಾರಿಗಾದರೂ ಹಿಂದೂ ಧರ್ಮದ ಬಗ್ಗೆ ಗೊಂದಲವಿದ್ದರೆ ಅವರು ನಮ್ಮ ಬಳಿ ಬರಲಿ, ನಾವು ಸಮಸ್ಯೆಯನ್ನು ಇತ್ಯರ್ಥಮಾಡುತ್ತೇವೆ. ಮಸೀದಿಗಳಿಗಿರುವ ಲೌಡ್‌ ಸ್ಪೀಕರ್‌ ಬಂದಾಗಬೇಕು” ಎಂದು ಹೇಳಿದ್ದಾರೆ.

ಹನುಮಾನ್‌ ಚಾಲೀಸಾ ಪರವಾಗಿ ಗಟ್ಟಿಯಾಗಿ ನಿಂತಿರುವ ರಾಜ್‌ ಠಾಕ್ರೆ ಮರಾಠಾವಾಡಾ, ವಿದರ್ಭಾ ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದಲ್ಲಿ ರ್ಯಾಲಿ ಮಾಡುವುದಾಗಿ ಹೇಳಿದ್ದಾರೆ. ಆದರೆ ಮಹಾರಾಷ್ಟ್ರ ಸಿಎಂ ಉದ್ಧವ್‌ ಠಾಕ್ರೆ ಕಾನೂನು ವ್ಯವಸ್ಥೆಕಾಪಾಡಲು ಎಲ್ಲ ಕ್ರಮಕೈಗೊಳ್ಳಿ, ಇನ್ನೊಬ್ಬರ ಆದೇಶಗಳಿಗೆ ಕಾಯಬೇಡಿ ಎಂದು ಪೋಲೀಸರಿಗೆ ಆದೇಶ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!