ಆಧುನಿಕ ಯಾತ್ರಾಸ್ಥಳವಾಗಿ ಹೊರಹೊಮ್ಮಲಿದೆ ಶ್ರೀ ರಾಜಾಧಿರಾಜ ಗೋವಿಂದ ದೇವಸ್ಥಾನ: ರಾಷ್ಟ್ರಪತಿ ಕೋವಿಂದ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ನಗರದ ವಸಂತಪುರದ ವೈಕುಂಠ ಬೆಟ್ಟದಲ್ಲಿ ನಿರ್ಮಿಸಲಾಗಿರುವ ರಾಜಾಧಿರಾಜ ಗೋವಿಂದ ದೇವಸ್ಥಾನವು ಆಧುನಿಕ ಯಾತ್ರಾ ಸ್ಥಳವಾಗಿ ಹೊರಹೊಮ್ಮುತ್ತದೆ ಮತ್ತು ಹೆಚ್ಚಿನ ಸಂಖ್ಯೆಯ ಭಕ್ತರನ್ನು ಆಕರ್ಷಿಸುತ್ತದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದರು.
ಇಸ್ಕಾನ್ ನಿರ್ಮಿಸಿರುವ ಶ್ರೀ ರಾಜಾಧಿರಾಜ ಗೋವಿಂದ ದೇವಸ್ಥಾನದ ಲೋಕಾರ್ಪಣೆ ಕಾರ್ಯ ನೆರವೇರಿಸಿ ಮಾತನಾಡಿದ ಅವರು, ದೇವಾಲಯಗಳು ಹಿಂದು ಧರ್ಮದ ಪ್ರಮುಖ ಸಂಕೇತಗಳಾಗಿವೆ. ಪವಿತ್ರ ಸ್ಥಳಗಳಾಗಿವೆ. ದೇವರ ಆರಾಧಕರು ದೈವಿಕ ಉಪಸ್ಥಿತಿ ಅನುಭವಿಸುತ್ತಾರೆ. ಇನ್ನೊಂದು ಹಂತದಲ್ಲಿ ದೇವಾಲಯಗಳು ಸ್ಥಳಗಳಿಗಿಂತ ಹೆಚ್ಚಾಗಿ ಪೂಜೆ, ಕಲೆ, ವಾಸ್ತುಶಿಲ್ಪ, ಭಾಷೆ ಮತ್ತು ಜ್ಞಾನ ಸಂಪ್ರದಾಯಗಳ ಸಂಗಮ ಸ್ಥಳವಾಗಿದೆ ಎಂದರು.
ನಮ್ಮ ಮಹಾನ್ ಆಧ್ಯಾತ್ಮಿಕ ನಾಯಕರಾದ ಶಂಕರಾಚಾರ್ಯ, ರಾಮಾನುಜಾಚಾರ್ಯ, ಮಧ್ವಾಚಾರ್ಯ ಮತ್ತು ಚೈತನ್ಯ ಮಹಾಪ್ರಭುಗಳು ನಮಗೆ ವಿವಿಧ ಮಾರ್ಗಗಳನ್ನು ತೋರಿಸಿದರು. ನಂತರದ ದಿನಗಳಲ್ಲಿ ರಾಮಕೃಷ್ಣ ಪರಮಹಂಸರು ಮತ್ತು ಸ್ವಾಮಿ ವಿವೇಕಾನಂದರು ಸೇರಿದಂತೆ ಅನೇಕರು ಅದೇ ಧೋರಣೆಯನ್ನು ಪುನರುಚ್ಚರಿಸಿದ್ದಾರೆ. ಭಗವದ್ಗೀತೆ ಎಲ್ಲ ಹಿಂದೂಗಳ ಅತ್ಯಂತ ಪ್ರಮುಖವಾದ ಗ್ರಂಥವಾಗಿದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!