RRR ಸಕ್ಸೆಸ್ | ವಿದೇಶಿಗರಿಗೆ ಯಾಕಿಷ್ಟ ಎಂದು ತಿಳಿಯಲು ಹೊರಟಿದ್ದಾರೆ ರಾಜಮೌಳಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

RRR ಸಿನಿಮಾ ರಿಲೀಸ್ ಆಗಿ 10 ತಿಂಗಳು ಕಳೆದರೂ ಈ ಹೆಸರು ದಿನದಿಂದ ದಿನಕ್ಕೆ ಹೆಸರು ಮಾಡುತ್ತಲೇ ಇದೆ. ಈಗಲೂ ಹಾಲಿವುಡ್‌ನ ಕೆಲವು ಥಿಯೇಟರ್‌ಗಳಲ್ಲಿ ಆರ್‌ಆರ್‌ಆರ್ ಚಿತ್ರ ಪ್ರದರ್ಶನಗೊಳ್ಳುತ್ತಿದೆ ಎಂದರೆ ಈ ಚಿತ್ರ ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಎಷ್ಟು ದೊಡ್ಡ ಯಶಸ್ಸನ್ನು ಸಾಧಿಸಿದೆ ಎಂದು ಅರ್ಥಮಾಡಿಕೊಳ್ಳಬಹುದು. ಭಾರತ ಮಾತ್ರವಲ್ಲದೆ ಜಪಾನ್, ಅಮೆರಿಕದಲ್ಲೂ ಈ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ.

ಹಾಲಿವುಡ್ ಪ್ರೇಕ್ಷಕರು ಮತ್ತು ವಿದೇಶಿಗರು ಈ ಚಿತ್ರವನ್ನು ನಮಗಿಂತ ಹೆಚ್ಚು ಮೆಚ್ಚುತ್ತಿದ್ದಾರೆ. ಈ ಚಿತ್ರದ ದೃಶ್ಯಗಳು ಮತ್ತು ಹಾಡುಗಳಿಗೆ ಫಿದಾ ಆಗುತ್ತಿದ್ದಾರೆ. ಈಗಾಗಲೇ ಹಲವು ಹಾಲಿವುಡ್ ಪ್ರಶಸ್ತಿಗಳನ್ನು ಗೆದ್ದಿರುವ RRR ಚಿತ್ರ ಇತ್ತೀಚೆಗೆ, ಇಂದು ಬೆಳಿಗ್ಗೆ, ಆಸ್ಕರ್ ನಂತರದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾದ ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಕೀರವಾಣಿ ಅತ್ಯುತ್ತಮ ಹಾಡಿನ ವಿಭಾಗದಲ್ಲಿ ನಾಟು ನಾಟು ಹಾಡಿಗೆ ಪ್ರಶಸ್ತಿ ಪಡೆದರು.

ಕಳೆದ ಕೆಲವು ದಿನಗಳಿಂದ ರಾಜಮೌಳಿ ಹಾಲಿವುಡ್‌ನಲ್ಲಿ ಆರ್‌ಆರ್‌ಆರ್ ಚಿತ್ರದ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಹಿನ್ನಲೆಯಲ್ಲಿ ಹಾಲಿವುಡ್ ಪೇಪರ್ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಾಜಮೌಳಿ ಹೇಳಿದ್ದು ಹೀಗೆ.. ಸಾಮಾನ್ಯವಾಗಿ ಚಿತ್ರವೊಂದು ಬಿಡುಗಡೆಯಾದರೆ ಒಂದು ತಿಂಗಳಲ್ಲೇ ಎಲ್ಲ ಪ್ರಚಾರವೂ ಮುಗಿದು ಹೋಗುತ್ತದೆ. ಆದರೆ RRR ಬಿಡುಗಡೆಯಾಗಿ ಇಷ್ಟು ತಿಂಗಳು ಕಳೆದರೂ ಜನ ಈ ಸಿನಿಮಾದ ಬಗ್ಗೆ ಮಾತನಾಡುತ್ತಲೇ ಇದ್ದಾರೆ. ವಿದೇಶಿಗರಿಗೆ ಈ ಸಿನಿಮಾ ತುಂಬಾ ಇಷ್ಟ. ತುಂಬಾ ವಿದೇಶಿಗರು ಈ ಸಿನಿಮಾವನ್ನು ಏಕೆ ಇಷ್ಟಪಡುತ್ತಾರೆ ಎಂದು ತಿಳಿಯಬೇಕು. ಈ ಚಿತ್ರದಲ್ಲಿ ತೋರಿಸಿರುವ ಸೂಪರ್ ಸಾಹಸ ದೃಶ್ಯಗಳು, ಹಾಡುಗಳು ಮತ್ತು ನೃತ್ಯಗಳು ಅವರಿಗೆ ಇಷ್ಟವಾಗುತ್ತವೆ. ಈ ಸಿನಿಮಾ ಎಲ್ಲಾ ಅಂಶಗಳ ಸಂಯೋಜನೆಯಾಗಿದೆ. ಸಾಮಾನ್ಯವಾಗಿ ಭಾರತದಲ್ಲಿನ ಕಥೆಗಳು ಹೆಚ್ಚಾಗಿ ಹೀಗಿರುತ್ತವೆ. ವಿದೇಶಿಗರಿಗೆ ಈ ಸಿನಿಮಾ ಎಲ್ಲರಿಗೂ ಇಷ್ಟವಾಗಲಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!