ಪಾಕಿಸ್ತಾನ ನನಗೆ ಅನುಮತಿ ನೀಡಿಲ್ಲ: ಆನಂದ್ ಮಹೀಂದ್ರಾ ಟ್ವೀಟ್‌ಗೆ ರಾಜಮೌಳಿ ಪ್ರತಿಕ್ರಿಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಾಹುಬಲಿ ಚಿತ್ರದ ಮೂಲಕ ಭಾರತದಾದ್ಯಂತ ಜನಪ್ರಿಯತೆ ಗಳಿಸಿರುವ ರಾಜಮೌಳಿ, RRR ಚಿತ್ರದ ಮೂಲಕ ವಿಶ್ವದಾದ್ಯಂತ ಮನ್ನಣೆ ಪಡೆದಿದ್ದಾರೆ. ಇಡೀ ವಿಶ್ವ ರಾಜಮೌಳಿ ಅವರ ಸಿನಿಮಾ ನಿರ್ಮಾಣಕ್ಕೆ ಫಿದಾ ಆಗಿದೆ. ಹಲವು ವರ್ಷಗಳಿಂದ ಅಸಾಧ್ಯ ಎನಿಸಿದ್ದ ಆಸ್ಕರ್ ಪ್ರಶಸ್ತಿಯನ್ನು ನಾಟು ನಾಟು ಹಾಡಿನ ಮೂಲಕ ತಂದು ಹೊಸ ಇತಿಹಾಸ ಸೃಷ್ಟಿಸಿದವರು ರಾಜಮೌಳಿ.

ಇದರಿಂದಾಗಿ ರಾಜಮೌಳಿ ಅವರ ಮುಂದಿನ ಸಿನಿಮಾಗಳ ನಿರೀಕ್ಷೆಗಳು ಭಾರೀ ಪ್ರಮಾಣದಲ್ಲಿ ಹೆಚ್ಚಿವೆ. ಸದ್ಯದಲ್ಲೇ ರಾಜಮೌಳಿ ಮಹೇಶ್ ಬಾಬು ಜೊತೆ ದೊಡ್ಡ ಮಟ್ಟದಲ್ಲಿ ಸಿನಿಮಾ ಮಾಡಲಿದ್ದಾರೆ. ಆ ನಂತರವೂ ಅವರು ಮಹಾಭಾರತವನ್ನು ಮಾಡುತ್ತಾರೆ ಎಂಬ ಹಲವು ಊಹಾಪೋಹಗಳಿವೆ. ಇತ್ತೀಚೆಗಷ್ಟೇ ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ರಾಜಮೌಳಿ ನಿರ್ದೇಶನದ ಸಿನಿಮಾವೊಂದರ ಕುರಿತು ಟ್ವೀಟ್ ಮಾಡಿದ್ದು, ಅದಕ್ಕೆ ರಾಜಮೌಳಿ ಉತ್ತರಿಸಿದ್ದು, ಟ್ವೀಟ್ ಗಳು ವೈರಲ್ ಆಗಿವೆ.

ಆನಂದ್ ಮಹೀಂದ್ರಾ ಅವರು ಸಿಂಧೂ ನಾಗರಿಕತೆಯನ್ನು ತೋರಿಸುವ ಹರಪ್ಪಾ ಮತ್ತು ಮೊಹೆಂಜೊದಾರೊಗೆ ಸಂಬಂಧಿಸಿದ ಫೋಟೋವನ್ನು ಹಂಚಿಕೊಂಡಿದ್ದಾರೆ..ಇವು ನಮ್ಮ ಇತಿಹಾಸವನ್ನು ಜೀವಂತವಾಗಿ ತೋರಿಸುವ ಮತ್ತು ಅದರ ಬಗ್ಗೆ ಮಾತನಾಡುವ ಚಿತ್ರಗಳಾಗಿವೆ. ನಮ್ಮ ಪ್ರಾಚೀನ ನಾಗರಿಕತೆಯ ಬಗ್ಗೆ ಒಳ್ಳೆಯ ಸಿನಿಮಾ ಮಾಡಿ ಜಗತ್ತಿಗೆ ತಿಳಿಸುವಂತೆ ರಾಜಮೌಳಿ ಅವರಲ್ಲಿ ವಿನಂತಿಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.

ಆನಂದ್ ಮಹೀಂದ್ರಾ ಟ್ವೀಟ್ ಗೆ ರಾಜಮೌಳಿ ಪ್ರತಿಕ್ರಿಯಿಸಿದ್ದು, ಮಗಧೀರ ಚಿತ್ರೀಕರಣ ಮಾಡುವಾಗ ನನಗೆ ಬಹಳ ಪುರಾತನವಾದ ಮರವೊಂದು ಎದುರಾಯಿತು. ಇದು ಪಳೆಯುಳಿಕೆಯಾಗಿ ಮಾರ್ಪಟ್ಟಿದೆ. ಆಗ ಸಿಂಧೂ ನಾಗರಿಕತೆಯ ಉಗಮ ಮತ್ತು ಪತನದ ಕುರಿತು ಸಿನಿಮಾ ಮಾಡುವ ಆಲೋಚನೆ ಈ ಮರದಿಂದ ಬಂದಿತ್ತು. ಅದರ ನಂತರ ನಾನು ಕೆಲವು ವರ್ಷಗಳ ನಂತರ ಪಾಕಿಸ್ತಾನಕ್ಕೆ ಹೋಗಿದ್ದೆ. ಆ ಕಥೆಗಾಗಿ ಮೊಹೆಂಜೊ ದಾರೊವನ್ನು ಭೇಟಿ ಮಾಡಲು ನಾನು ತುಂಬಾ ಪ್ರಯತ್ನಿಸಿದೆ. ಆದರೆ ನನಗೆ ಪಾಕಿಸ್ತಾನ ಅನುಮತಿ ನೀಡಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಇದರೊಂದಿಗೆ ರಾಜಮೌಳಿ ಮತ್ತು ಆನಂದ್ ಮಹೀಂದ್ರ ಅವರ ಟ್ವೀಟ್‌ಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಮತ್ತು ರಾಜಮೌಳಿ ಈ ಚಿತ್ರ ಮಾಡಲು ದೃಢ ನಿರ್ಧಾರ ಮಾಡಿ ಎಂದು ಪ್ರೇಕ್ಷಕರು ಮತ್ತು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!