Wednesday, August 10, 2022

Latest Posts

ಮೂತ್ರಪಿಂಡ ಶಸ್ತ್ರಚಿಕಿತ್ಸೆ ನಂತರ ಇಂದು ಭಾರತಕ್ಕೆ ಬರಲಿದ್ದಾರೆ ‘ತಲೈವಾ’

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಆರೋಗ್ಯ ತಪಾಸಣೆಗೆ ಅಮೆರಿಕಕ್ಕೆ ತೆರಳಿದ ಸೂಪರ್ ಸ್ಟಾರ್ ರಜನಿಕಾಂತ್ ಇಂದು ಭಾರತಕ್ಕೆ ವಾಪಾಸಾಗಲಿದ್ದಾರೆ.
ಜೂ.19ರಂದು ತಪಾಸಣೆಗೆ ತೆರಳಿದ್ದ ರಜನಿಕಾಂತ್ ಮೂತ್ರಪಿಂಡ ಶಸ್ತ್ರಚಿಕಿತ್ಸೆ ನಂತರ ವಿಶ್ರಾಂತಿ ಪಡೆದು ವಾಪಾಸಾಗಲಿದ್ದಾರೆ. ಕೇಂದ್ರ ಸರ್ಕಾರದ ಅನುಮತಿ ಪಡೆದು ರಜನಿಕಾಂತ್ ಆರೋಗ್ಯ ತಪಾಸಣೆಗೆ ಅಮೆರಿಕಾಗೆ ತೆರಳಿದ್ದರು. ದೀರ್ಘಕಾಲದ ತಪಾಸಣೆ ಮತ್ತು ವಿಶ್ರಾಂತಿ ಬಳಿಕ ಇಂದು ಭಾರತಕ್ಕೆ ಆಗಮಿಸಲಿದ್ದಾರೆ.ಪತ್ನಿ ಲತಾ ಜೊತೆ ವಿಮಾನ ನಿಲ್ದಾಣದಲ್ಲಿ ರಜನಿಕಾಂತ್ ಕಾಣಿಸಿಕೊಂಡಿದ್ದು, ವಿಡಿಯೋ ಫೋಟೊಗಳು ವೈರಲ್ ಆಗಿದ್ದವು. ಇದಾದ ನಂತರ ಕೊರೋನಾ ಕಾರಣದಿಂದ ಅಮೆರಿಕಕ್ಕೆ ತೆರಳುವುದು ಅಸಾಧ್ಯವಾಗಿತ್ತು, ಆದರೆ ಹೇಗೆ ಹೋದರು ಎಂದು ಕೆಲವರು ಪ್ರಶ್ನೆಯೆತ್ತಿದ್ದು, ಸರ್ಕಾರದ ಅನುಮತಿ ನಂತರವೇ ರಜನಿಕಾಂತ್ ಅಮೆರಿಕಕ್ಕೆ ತೆರಳಿದ್ದರು ಎನ್ನಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss