ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………..
ಹೊಸದಿಗಂತ ಆನ್ ಲೈನ್ ಡೆಸ್ಕ್:
ಕನ್ನಡ ಚಿತ್ರರಂಗದ ಮತ್ತೊಬ್ಬ ಹಿರಿಯ ಕಲಾವಿದ ರಾಜಾರಾಂ ನಿಧನರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು.
‘ನಮ್ಮೂರ್ ಹುಡ್ಗ’ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ರಾಜರಾಂ ನಟಿಸಿದ್ದಾರೆ. ಸರ್ಕಾರಿ ಹುದ್ದೆಗೆ ಸೇರಿದ್ದರೂ, ರಂಗಭೂಮಿ ಮೇಲಿನ ಆಸಕ್ತಿಯಿಂದ ರಂಗತಂಡ ಕಟ್ಟಿದ್ದ ಅವರು ಹಲವಾರು ದಿಗ್ಗಜರ ನಿರ್ದೇಶನದ ಅಪಾರ ನಾಟಕಗಳಲ್ಲಿ ಅಭಿನಯಿಸಿದ್ದಾರೆ.
ನಟ ಸೃಜನ್ ಲೋಕೇಶ್ ಸಾಮಾಜಿ ಜಾಲತಾಣ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡುವ ಮೂಲಕ, ಮಾಹಿತಿ ಹಂಚಿಕೊಂಡಿದ್ದು, ರಾಜಾರಾಂ ಅಂಕಲ್ ನಿಧನದಿಂದ ದುಃಖವಾಗಿದೆ.ಅವರ ಜೊತೆ ಕಳೆದ ಸಮಯವನ್ನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ.