ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ರಾಹುಲ್ ಅಬ್ಬರಕ್ಕೆ ಮಂಕಾದ ರಾಜಸ್ಥಾನ್ ಬೌಲರ್ಸ್: ಗೆಲುವಿಗೆ 222 ರನ್​ಗಳ ಟಾರ್ಗೆಟ್

ಹೊಸದಿಗಂತ ಆನ್ ಲೈನ್ ಡೆಸ್ಕ್:

ಇಂಡಿಯನ್ ಪ್ರೀಮಿಯರ್ ಲೀಗ್​​ನ 4ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಪಂಜಾಬ್ ಕಿಂಗ್ಸ್ 222 ರನ್​ಗಳ ಟಾರ್ಗೆಟ್ ನೀಡಿದೆ.
ಟಾಸ್​ ಸೋತು ಬ್ಯಾಟಿಂಗ್ ಇಳಿದ ಪಂಜಾಬ್ ಕಿಂಗ್ಸ್​ ಆರಂಭದಲ್ಲೇ ವಿಕೆಟ್​ ಮಯಾಂಕ್ ಅಗರ್​ವಾಲ್(4) ವಿಕೆಟ್​ ಕಳೆದುಕೊಂಡಿತು. ಆದರೆ ನಂತರ ಬಂದ ಯುನಿವರ್ಸಲ್ ಬಾಸ್​ ಕ್ರಿಸ್​ಗೇಲ್ ನಾಯಕ ರಾಹುಲ್ ಜೊತೆಯಾಟ ನೀಡಿದರು.
ಬಳಿಕ ಗೇಲ್ 28 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್​ಗಳ ನೆರವಿನಿಂದ 40 ರನ್​ಗಳಿಸಿ ಯುವ ಆಲ್​ರೌಂಡರ್​ ರಿಯಾನ್ ಪರಾಗ್​ಗೆ ವಿಕೆಟ್​ ಒಪ್ಪಿಸಿದರು.
ಆದರೆ ಮತ್ತೊಂದೆಡೆ ಅಬ್ಬರಿಸಲಾರಂಭಿಸಿದ ಕೆಎಲ್ ರಾಹುಲ್ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ತಂಡದ ಮೊತ್ತವನ್ನು ಹೆಚ್ಚಿಸುತ್ತಲೇ ಹೋದರು. ಅಲ್ಲದೆ ಕೇವಲ 30 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಮತ್ತೆ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದೀಪಕ್ ಹೂಡಾ ರಾಹುಲ್​ ಜೊತೆಗೂಡಿ ಕೇವಲ 22 ಎಸೆತಗಳಲ್ಲಿ ಅರ್ಧಶತಕಗಳ ಜೊತೆಯಾಟವಾಡಿದರು. ಈ ಮೂಲಕ 14 ಓವರ್ ಮುಕ್ತಾಯದ ವೇಳೆಗೆ ತಂಡದ ಮೊತ್ತವನ್ನು 150ಕ್ಕೇರಿಸಿದರು.
ದೀಪಕ್ ಹೂಡಾ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು 28 ಎಸೆತಗಳಲ್ಲಿ 6 ಸಿಕ್ಸರ್, 4 ಬೌಂಡರಿಗಳೊಂದಿಗೆ 64 ರನ್ ಬಾರಿಸಿದ್ದ ಹೂಡಾ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು.
ಆದರೆ ಮತ್ತೊಂದೆಡೆ ರಾಹುಲ್ ಅಬ್ಬರ ಶುರುವಾಗಿತ್ತು. ಪರಿಣಾಮ 18ನೇ ಓವರ್​ ವೇಳೆಗೆ ಪಂಜಾಬ್ ಕಿಂಗ್ಸ್ ತಂಡದ ಮೊತ್ತವು 200ರ ಗಡಿದಾಟಿತು.
ಈ ವೇಳೆ ಕ್ರೀಸ್​ಗಿಳಿದ ನಿಕೋಲಸ್ ಪೂರನ್ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು.ಕೊನೆಯ ಎರಡು ಓವರ್​ಗಳಿರುವಾಗ ರಾಹುಲ್ ಜೊತೆಗೂಡಿದ ಶಾರುಖ್ ಖಾನ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.
50 ಎಸೆತಗಳನ್ನು ಎದುರಿಸಿದ್ದ ರಾಹುಲ್ 5 ಭರ್ಜರಿ ಸಿಕ್ಸ್​ ಹಾಗೂ 7 ಬೌಂಡರಿಗಳೊಂದಿಗೆ 91 ರನ್​ ಬಾರಿಸಿ ಮಿಂಚಿದರು.
ಕೊನೆಯ ಓವರ್​ನಲ್ಲಿ ಕೇವಲ 5 ರನ್​ಗಳಿಸುವುದರೊಂದಿಗೆ ಪಂಜಾಬ್ ಕಿಂಗ್ಸ್ ತಂಡವು ನಿಗದಿತ 20 ಓವರ್​ನಲ್ಲಿ 6 ವಿಕೆಟ್ ನಷ್ಟಕ್ಕೆ 221 ರನ್​ಗಳನ್ನು ಪೇರಿಸಿತು. RR ಪರ 4 ಓವರ್​ನಲ್ಲಿ 31 ರನ್​ ನೀಡಿ 3 ವಿಕೆಟ್ ಕಬಳಿಸಿದ ಯುವ ವೇಗಿ ಚೇತನ್ ಸಕರಿಯಾ ಯಶಸ್ವಿ ಬೌಲರ್​ ಎನಿಸಿಕೊಂಡರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss