ಬಸ್ ಟಾಪ್ ಮೇಲೆ ಪ್ರಯಾಣ ಸಂಭವಿಸಿತು ಭಾರೀ ಅವಘಡ: ಮೂವರು ಸ್ಥಳದಲ್ಲೇ ಮೃತ್ಯು

ಹೊಸದಿಗಂತ ಡಿಜಿಟಲ್ ಡೆಸ್ಕ್

ರಾಜಸ್ಥಾನ: ಜೈಸಲ್ಮೇರ್‌ನ ಪೋಲ್ಜಿ ಡೈರಿ ಬಳಿ ಬಸ್ಸಿನ ಛಾವಣಿ(ಟಾಪ್)ಯ ಮೇಲೆ ಪ್ರಯಾಣಿಸುತ್ತಿದ್ದಾಗ ವಿದ್ಯುತ್ ಸ್ಪರ್ಶವಾಗಿ ಮೂವರು ಮೃತಪಟ್ಟು ಮತ್ತು ಐದು ಜನರಿಗೆ ಗಾಯಗೊಂಡ ಘಟನೆ ನಡೆದಿದೆ.

ಅಪಘಾತಕ್ಕೊಳಗಾದ ಬಸ್ಸು ಜಾತ್ರೆಗೆ ಹೋಗುತ್ತಿತ್ತು. ಅವಘಡದಿಂದಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಒಬ್ಬರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗೆ ಜೋಧ್‌ಪುರಕ್ಕೆ ಸ್ಥಳಾಂತರಿಸಲಾಗಿದೆ. ಇನ್ನೂ ನಾಲ್ವರನ್ನು ನಿಗಾದಲ್ಲಿ ಇರಿಸಲಾಗಿದೆ ಎಂದು ವೈದ್ಯಾಧಿಕಾರಿ ಡಾ. ವಿ.ಕೆ. ವರ್ಮಾ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!