ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪಂಜಾಬ್​ ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ರಾಜಸ್ಥಾನ್ ರಾಯಲ್ಸ್

ಹೊಸದಿಗಂತ ಆನ್ ಲೈನ್ ಡೆಸ್ಕ್:

ಐಪಿಎಲ್ ​ನ 4ನೇ ಪಂದ್ಯದಲ್ಲಿ ಟಾಸ್​ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸಾಮ್ಸನ್​ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ರಾಹುಲ್​ ನೇತೃತ್ವದ ಪಂಜಾಬ್​ ಬ್ಯಾಟಿಂಗ್​ ನಡೆಸುತ್ತಿದೆ.
ಪಂಜಾಬ್ ಕಿಂಗ್ಸ್​ ಪರ ರಿಲೆ ಮೆರಿಡಿತ್, ಜೇ ರಿಚರ್ಡ್ಸನ್​ ಮತ್ತು ಶಾರುಖ್ ಖಾನ್ ಪದಾರ್ಪಣೆ ಮಾಡಿದರೆ, ರಾಜಸ್ಥಾನ್​ ರಾಯಲ್ಸ್ ಪರ ಮನನ್ ವೊಹ್ರಾ, ಮುಸ್ತಫಿಜುರ್​ ರಹಮಾನ್, ಶಿವಂ ದುಬೆ, ಚೇತನ್ ಸಕಾರಿಯಾ ಪದಾರ್ಪಣೆ ಮಾಡಿದ್ದಾರೆ.
ಪಂಜಾಬ್ ತಂಡದಲ್ಲಿ ವಿಂಡೀಸ್ ದೈತ್ಯ ಕ್ರಿಸ್​ ಗೇಲ್, ನಿಕೋಲಸ್​ ಪೂರನ್​ ಹಾಗೂ ಆಸ್ಟ್ರೇಲಿಯಾದ ವೇಗಿಗಳಾದ ಜೇ ರಿಚರ್ಡ್ಸನ್ ಮತ್ತು ರಿಲೆ ಮೆರಿಡಿಟ್ ವಿದೇಶಿ ಕೋಟಾದಲ್ಲಿ ಅವಕಾಶ ಪಡೆದಿದ್ದಾರೆ.
ಪಂಜಾಬ್ ಕಿಂಗ್ಸ್ : ಕೆಎಲ್ ರಾಹುಲ್(ನಾಯಕ/ವಿಕೀ), ಮಾಯಾಂಕ್ ಅಗರ್ವಾಲ್, ಕ್ರಿಸ್ ಗೇಲ್, ನಿಕೋಲಸ್ ಪೂರನ್, ದೀಪಕ್ ಹೂಡಾ, ಶಾರುಖ್ ಖಾನ್, ಜೇ ರಿಚರ್ಡ್ಸನ್, ಮುರುಗನ್ ಅಶ್ವಿನ್, ರಿಲೆ ಮೆರೆಡಿತ್, ಮೊಹಮ್ಮದ್ ಶಮಿ, ಅರ್ಷ್‌ದೀಪ್ ಸಿಂಗ್
ರಾಜಸ್ಥಾನ್ ರಾಯಲ್ಸ್ : ಜೋಸ್ ಬಟ್ಲರ್ (ವಿಕೀ), ಮನನ್ ವೊಹ್ರಾ, ಬೆನ್ ಸ್ಟೋಕ್ಸ್, ಸಂಜು ಸ್ಯಾಮ್ಸನ್ (ನಾಯಕ), ರಿಯಾನ್ ಪರಾಗ್, ಶಿವಮ್ ದುಬೆ, ರಾಹುಲ್ ತೇವಟಿಯಾ, ಕ್ರಿಸ್ ಮೋರಿಸ್, ಶ್ರೇಯಾಸ್ ಗೋಪಾಲ್, ಚೇತನ್ ಸಕರಿಯಾ, ಮುಸ್ತಫಿಜುರ್ ರೆಹಮಾನ್

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss