ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, June 24, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಬಿಗ್ ಬಾಸ್ ಮನೆಯ ಟಾಪ್ 5 ಕಂಟೆಸ್ಟೆಂಟ್ ಅಂದುಕೊಂಡಿದ್ದ ರಾಜೀವ್ ಔಟ್!

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಈ ವಾರವೂ ಕೂಡ ಸುದೀಪ್ ಅವರು ಅನಾರೋಗ್ಯದಿಂದ ಶೋ ಹೋಸ್ಟ್ ಮಾಡಿಲ್ಲ.
ಈ ಬಾರಿ ಎಲ್ಲಾ ಸ್ಟ್ರಾಂಗ್ ಎಂದುಕೊಂಡಿದ್ದ ಕಂಟೆಸ್ಟೆಂಟ್‌ಗಳೇ ನಾಮಿನೇಟ್ ಆಗಿದ್ದರು. ಸುದೀಪ್ ಕೂಡ ಇಲ್ಲ, ಸ್ಟ್ರಾಂಗ್ ಕಂಟೆಸ್ಟೆಂಟ್ಸ್ ಅಷ್ಟೇ ಇರೋದ್ರಿಂದ ನೋ ಎಲಿಮಿನೇಶನ್ ವೀಕ್ ಇರಬಹುದು ಅನ್ನೋ ನಿರ್ಧಾರಕ್ಕೆ ಮನೆಮಂದಿ ಬಂದಿದ್ರು. ಆದರೆ ಹಾಗಾಗಲಿಲ್ಲ. ಈ ವಾರ ಬಿಗ್‌ಬಾಸ್ ಮನೆಯಿಂದ ರಾಜೀವ್ ಎಲಿಮಿನೇಟ್ ಆಗಿದ್ದಾರೆ.
ಹೌದು.ರಾಜೀವ್ ಟಾಪ್ 5 ಕಂಟೆಸ್ಟೆಂಟ್ ಅಂತ ಜನ,ಮನೆಮಂದಿ ಇಬ್ಬರೂ ನಂಬಿದ್ರು. ಆದರೆ ಬಿಗ್‌ಬಾಸ್‌ನಲ್ಲಿ ಅಂದುಕೊಂಡಂತೆ ನಡೆಯೋಕೆ ಸಾಧ್ಯವೇ ಇಲ್ಲ. ಕಡೆಯದಾಗಿ ಯಾರ ಜರ್ನಿ ವಿಟಿ ತೋರಿಸುತ್ತಾರೋ ಅವರು ಎಲಿಮಿನೇಟ್ ಎಂದು ಬಿಗ್‌ಬಾಸ್ ಘೋಷಿಸಿದ್ರು. ರಾಜೀವ್ ವಿಟಿ ಬಂದ ತಕ್ಷಣ ಮನೆಯವರಿಗೆ ಇದನ್ನು ನಂಬೋದಕ್ಕೆ ಆಗಲಿಲ್ಲ. ಇನ್ನು ಹಲವರು ಸೀಕ್ರೆಟ್ ರೂಂಗೆ ಕಳಿಸಿದ್ದಾರೆ ಅಂತಲೂ ಹೇಳಿದ್ರು. ಆದರೆ ಈ ಬಾರಿ ಸೀಕ್ರೆಟ್ ರೂಂ ಇರುವಂತೆ ಕಾಣುತ್ತಿಲ್ಲ.
ರಾಜೀವ್ ಬಳಿ ತಮ್ಮ ಗೋಲ್ಡನ್ ಪಾಸ್ ಇದ್ದರೂ ಅವರು ಕಾನ್ಫಿಡೆನ್ಸ್‌ನಲ್ಲಿ ಅದನ್ನು ಬಳಸಲಿಲ್ಲ. ಇತ್ತೀಚೆಗೆ ಮನೆಮಂದಿ ಕೂಡ ರಾಜೀವ್ ಬಗ್ಗೆ ಸ್ವಲ್ಪ ಅಸಮಾಧಾನ ವ್ಯಕ್ತಪಡಿಸಿದ್ದರು. ಒಟ್ಟಾರೆ ರಾಜೀವ್ ಮನೆಯಿಂದ ಹೊರನಡೆದಿದ್ದು, ಮನೆಯಲ್ಲಿ ಎಲ್ಲರಿಗೂ ಕಣ್ಣೀರು ಬರುವಂತೆ ಮಾಡಿದೆ!

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss