ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………………………….
ಹೊಸದಿಗಂತ ಆನ್ ಲೈನ್ ಡೆಸ್ಕ್:
ಕೊರೋನಾಗೆ ಕನ್ನಡದ ಯುವ ನಿರ್ಮಾಪಕ ರಾಜಶೇಖರ್ ಬಲಿಯಾಗಿದ್ದಾರೆ.
ಈ ಬಗ್ಗೆ ನಟ ನೀನಾಸಂ ಸತೀಶ್ ಬೇಸರ ಹೊರ ಹಾಕಿದ್ದು, ಪೇಟ್ರೋಮ್ಯಾಕ್ಸ್ ಸಿನಿಮಾಗೆ ರಾಜಶೇಖರ್ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದರು. ಈ ಸಿನಿಮಾ ಆಗಲು ಅವರ ಪಾತ್ರ ತುಂಬಾನೇ ದೊಡ್ಡದಿದೆ ಎಂದು ನೀನಾಸಂ ಸತೀಶ್ ಅಭಿಪ್ರಾಯಪಟ್ಟಿದ್ದಾರೆ.
ರಾಜು ಕನ್ನಡ ಚಿತ್ರರಂಗದಲ್ಲಿ ಬದುಕು ಕಟ್ಟುವ ಹಂತದಲ್ಲಿದ್ದ ಮಹತ್ವಾಕಾಂಕ್ಷಿ. ನಮ್ಮ ಪೇಟ್ರೋಮ್ಯಾಕ್ಸ್ ಚಿತ್ರ ಆಗಲು ಮುಖ್ಯವಾದ ವ್ಯಕ್ತಿ. ಅವರ ಜತೆ ಜಗಳ, ಪ್ರೀತಿ ಎಲ್ಲವೂ ಇತ್ತು. ಕಾರ್ಯಕಾರಿ ನಿರ್ಮಾಪಕರಾಗಿ 2 ತಿಂಗಳು ನಮ್ಮ ಜೊತೆಗಿದ್ದರು. ಪೆಟ್ರೋಮ್ಯಾಕ್ಸ್ ಗೆದ್ದು ಅದರ ಅದ್ದೂರಿ ಸಮಾರಂಭ ಮಾಡುವ ಕನಸು ಕಂಡಿದ್ದರು ಎಂದು ಸತೀಶ್ ತಮ್ಮ ಬರಹ ಆರಂಭಿಸಿದ್ದಾರೆ.
ರಾಜು ಯಾವಾಗಲು ನಗುತ್ತ ಸೆಟ್ ಅಲ್ಲಿ ಕೂತಿರುತ್ತಿದ್ದನ್ನು ನೆನಪಿಸಿಕೊಂಡರೆ ಎದೆಗೆ ಭರ್ಜಿ ಚುಚ್ಚಿದಂತಾಗುತ್ತದೆ. ಮೈಸೂರಿನಲ್ಲಿ ರಾತ್ರಿಯೆಲ್ಲ ಜೊತೆಗಿದ್ದು, ಕಾರು ಹತ್ತಿಸಿ ನಾವು ಗೆಲ್ತೀವಿ. ನಡೆಯಿರಿ ನೆಮ್ಮದಿಯಾಗಿ ನಿದ್ದೆ ಮಾಡಿ ಎಂದು ಹೇಳಿ ರಾಜು ನೀನು ಚಿರನಿದ್ರೆಗೆ ಜಾರಿದ್ದು ತಪ್ಪಲ್ಲವೇ? ಅಂತಿಮ ನಮನ ಸಲ್ಲಿಸಲು ನನಗೆ ಮನಸ್ಸಾಗುತ್ತಿಲ್ಲ ಕ್ಷಮಿಸಿ ಎಂದಿದ್ದಾರೆ.