ತಮಿಳುನಾಡಿನಲ್ಲಿ ಅತಿ ಹೆಚ್ಚು ತೆರಿಗೆ ಪಾವತಿದಾರನಾಗಿ ರಜನಿಕಾಂತ್‌: ಐಟಿ ಇಲಾಖೆಯಿಂದ ಗೌರವ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಸ್ ಕಂಡಕ್ಟರ್ ಮಟ್ಟದಿಂದ ಸ್ಟಾರ್‌ ಹೀರೋವರೆಗೆ ಕಠಿಣ ಪರಿಶ್ರಮದಿಂದ ಮೇಲೆ ಬಂದ ನಟ ರಜನಿಕಾಂತ್. ಸೂಪರ್ ಸ್ಟಾರ್ ಆಗಿ ವಿಶ್ವದಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಸೌತ್ ಹೀರೋಗಳಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಾಯಕ ಕೂಡಾ ರಜನಿಕಾಂತ್. ಇತ್ತೀಚೆಗಷ್ಟೇ ತಮಿಳುನಾಡಿನಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸಿ ಆದಾಯ ತೆರಿಗೆ ಇಲಾಖೆಯಿಂದ ಗೌರವ ಪಡೆದರು.

ಹಲವಾರು ವರ್ಷಗಳಿಂದ ತಮಿಳುನಾಡಿನಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸಿದ್ದಕ್ಕಾಗಿ ಆದಾಯ ತೆರಿಗೆ ದಿನದಂದು ಆಯೋಜಿಸಲಾದ ಕಾರ್ಯಕ್ರಮದಲ್ಲಿ ರಜನಿಕಾಂತ್ ಅವರನ್ನು ಗೌರವಿಸಲು ಐಟಿ ಇಲಾಖೆ ಆಹ್ವಾನ ನೀಡಿತ್ತು. ಕಾರಣಾಂತರಗಳಿಂದ ರಜನಿಕಾಂತ್ ಭಾಗವಹಿಸಲು ಸಾಧ್ಯವಾಗದ ಕಾರಣ ರಜನಿಕಾಂತ್ ಪುತ್ರಿ ಐಶ್ವರ್ಯಾ ಕಾರ್ಯಕ್ರಮಕ್ಕೆ ಹಾಜರಾಗಿ, ತೆಲಂಗಾಣ ರಾಜ್ಯಪಾಲ ತಮಿಳಿಸೈ ಕೈಯಿಂದ ರಜನಿಕಾಂತ್ ಪರವಾಗಿ ಸ್ಮರಣಿಕೆಯನ್ನು ಸ್ವೀಕರಿಸಿದರು.

ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಐಶ್ವರ್ಯಾ ”ಅತ್ಯಧಿಕ ತೆರಿಗೆ ಪಾವತಿದಾರನ ಮಗಳು ಎಂಬ ಹೆಮ್ಮೆ ನನಗಿದೆ. ನನ್ನ ತಂದೆಯನ್ನು ಈ ರೀತಿ ಗೌರವಿಸಿದ್ದಕ್ಕಾಗಿ ತಮಿಳುನಾಡು ಮತ್ತು ಪುದುಚೇರಿಯ ಐಟಿ ಇಲಾಖೆಗಳಿಗೆ ವಿಶೇಷ ಧನ್ಯವಾದಗಳು, ”ಎಂದು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!