ವಾಣಿಜ್ಯ ಬಳಕೆಗೆ ಹೆಸರು, ಧ್ವನಿ, ಸ್ಟೈಲ್ ಬಳಸದಂತೆ ರಜನಿಕಾಂತ್ ಎಚ್ಚರಿಕೆ ನೋಟಿಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಿರಿಯ ನಟ ರಜನಿಕಾಂತ್ ತಮ್ಮ ಹೆಸರು, ಧ್ವನಿ, ಸ್ಟೈಲ್ ಹಾಗೂ ಮ್ಯಾನರಿಸಂನನ್ನು ವಾಣಿಜ್ಯ ಬಳಕೆಗೆ ಉಪಯೋಗಿಸದಂತೆ ಸಾರ್ವಜನಿಕವಾಗಿ ಎಚ್ಚರಿಕೆ ನೋಟೀಸ್ ನೀಡಿದ್ದಾರೆ.

ಸಿನಿಮಾದ ತುಣುಕು, ಧ್ವನಿ ಹಾಗೂ ಮ್ಯಾನರಿಸಂ ಬಳಸಿದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ರಜನಿಕಾಂತ್ ಅವರಿಗೆ ತಿಳಿಯದಂತೆ ಅವರ ಫೋಟೊ, ವಿಡಿಯೋ ತುಣುಕು, ಧ್ವನಿ ಹಾಗೂ ಸ್ಟೈಲ್‌ಗಳನ್ನು ವಾಣಿಜ್ಯ ಬಳಕೆ ಮಾಡಲಾಗಿತ್ತು. ಇದು ಗಮನಕ್ಕೆ ಬಂದ ಹಿನ್ನೆಲೆ ನೋಟಿಸ್ ಬಿಡುಗಡೆ ಮಾಡಿದ್ದಾರೆ.

ಕೆಲ ಪೋಸ್ಟ್‌ಗಳು ಗೌರವಕ್ಕೆ ಧಕ್ಕೆ ತರುವಂತೆ ಇವೆ, ಇದನ್ನು ತಡೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ರಜನಿಕಾಂತ್ ಹೇಳಿದ್ದಾರೆ. ಈ ಹಿಂದೆ ಬಾಲಿವುಡಗ ಹಿರಿಯ ನಟಿ ಅಮಿತಾಬ್ ಬಚ್ಚನ್ ಕೂಡ ನೋಟೀಸ್ ಜಾರಿ ಮಾಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!