ನಾಳೆ ಕಲಬುರಗಿಗೆ ರಾಜನಾಥ್ ಸಿಂಗ್ ಭೇಟಿ: ಬಿಜೆಪಿಯ ‘ಲೋಕತಂತ್ರ ಬಚಾವೋ’ ಅಭಿಯಾನದಲ್ಲಿ ಭಾಗಿ

ಹೊಸದಿಗಂತ ವರದಿ ಕಲಬುರಗಿ: ಕೇಂದ್ರ ರಕ್ಷಣಾ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ರಾಜನಾಥ್ ಸಿಂಗ್ ಅವರು ನ.25ರಂದು ನಾಳೆ ಬುಧವಾರ ಕಲಬುರಗಿ ನಗರಕ್ಕೆ ಭೇಟಿ ನೀಡಲಿದ್ದು, ಬಿಜೆಪಿ ಹಮ್ಮಿಕೊಂಡಿರುವ ‘ಲೋಕತಂತ್ರ ಬಚಾವೋ, ಅರಾಜಕತಾ ಹಠಾವೋ ಅಭಿಯಾನದಡಿ ನಡೆಯಲಿರುವ ಬೃಹತ್ ಪಾದಯಾತ್ರೆಯಲ್ಲಿ ಪಾಲ್ಗೊಂಡು ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ಬಿಜೆಪಿ ದೇಶಾದ್ಯಂತ ಈ ಅಭಿಯಾನ ಹಮ್ಮಿಕೊಂಡಿದೆ. ಇದರ ಭಾಗವಾಗಿ ಕಲಬುರಗಿಯಲ್ಲಿ ನಡೆಯಲಿರುವ ಪಾದಯಾತ್ರೆಗೆ … Continue reading ನಾಳೆ ಕಲಬುರಗಿಗೆ ರಾಜನಾಥ್ ಸಿಂಗ್ ಭೇಟಿ: ಬಿಜೆಪಿಯ ‘ಲೋಕತಂತ್ರ ಬಚಾವೋ’ ಅಭಿಯಾನದಲ್ಲಿ ಭಾಗಿ