Saturday, August 13, 2022

Latest Posts

ರಾಜ್ಯಸಭೆಯ ಸದನದ ನಾಯಕರಾಗಿ ಪಿಯೂಷ್ ಗೋಯಲ್ ನೇಮಕ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್

ರಾಜ್ಯಸಭೆಯ ಉಪ ಮಹಡಿ ನಾಯಕರಾಗಿರುವ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಬಿಜೆಪಿ ರಾಜ್ಯಸಭೆಯ ಸದನದ ನಾಯಕರಾಗಲಿದ್ದಾರೆ. ಸಧ್ಯ ಕರ್ನಾಟಕದ ರಾಜ್ಯಪಾಲರಾಗಿರುವ  ಥಾವರ್ ಚಂದ್ ಗೆಹ್ಲೋಟ್ ಅವರ ರಾಜೀನಾಮೆಯ ನಂತ್ರ ತೆರವಾದ ಸ್ಥಾನವನ್ನ ಗೋಯಲ್ ಅಲಂಕರಿಸಲಿದ್ದಾರೆ.
ಹಿರಿಯ ಸಂಸದೀಯ ನಾಯಕರಾಗಿರುವ ಗೋಯಲ್ ಅವರು ತ್ರಿವಳಿ ತಲಾಖ್ ಮತ್ತು ಅನುಚ್ಛೇದ 370 ರಂತಹ ನಿರ್ಣಾಯಕ ಮಸೂದೆಗಳನ್ನು ಅಂಗೀಕರಿಸುವ ಸಮಯದಲ್ಲಿ ಸೇರಿದಂತೆ ಪರಿಣಾಮಕಾರಿ ಸನ್ನಿವೇಶಗಳಲ್ಲಿ ಫ್ಲೋರ್ ಮ್ಯಾನೇಜರ್ ಆಗಿದ್ದಾರೆ.
ಮಹಾರಾಷ್ಟ್ರ ಮೂಲದ ಗೋಯೆಲ್ , ರಾಜ್ಯದ ಜನರೊಂದಿಗೆ ಮತ್ತು ವಿರೋಧ ಪಕ್ಷದ ಇತರ ನಾಯಕರೊಂದಿಗೆ ಅತ್ಯುತ್ತಮ ಬಾಂಧವ್ಯವನ್ನು ಹಂಚಿಕೊಂಡಿದ್ದಾರೆ. ರೈಲ್ವೆ ಸಚಿವರಾಗಿದ್ದಅವ್ರು ಇತ್ತೀಚಿನ ಸಂಪುಟ ಪುನಾರಚನೆಯ ನಂತರ ವಾಣಿಜ್ಯ ಮತ್ತು ಉದ್ಯಮ ಸೇರಿದಂತೆ ಪ್ರಸ್ತುತ ಮೂರು ಖಾತೆಗಳನ್ನ ಹೊಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss