Thursday, July 7, 2022

Latest Posts

ಬಿಎಸ್​ಎಫ್ ಮಹಾನಿರ್ದೇಶಕ ‘ರಾಕೇಶ್ ಅಸ್ಥಾನಾ’ ದೆಹಲಿ ಪೋಲಿಸ್ ಆಯುಕ್ತರಾಗಿ ನೇಮಕ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಬಿ.ಎಸ್.ಎಫ್ ಮಹಾನಿರ್ದೇಶಕ ರಾಕೇಶ್ ಅಸ್ಥಾನಾ ಅವರನ್ನು ದೆಹಲಿಯ ನೂತನ ಪೊಲೀಸ್ ಆಯುಕ್ತರನ್ನಾಗಿ ಗೃಹ ವ್ಯವಹಾರಗಳ ಸಚಿವಾಲಯ ನೇಮಕ ಮಾಡಿದೆ.

ಕೇಂದ್ರ ಸರ್ಕಾರವು ಮಂಗಳವಾರ ಈ ಆದೇಶ ಹೊರಡಿಸಿದ್ದು,  ಸೇವೆಯಿಂದ ನಿವೃತ್ತರಾಗಲು ಕೇವಲ ಮೂರು ದಿನ ಬಾಕಿಯಿರುವಾಗ ರಾಕೇಶ್ ಅವರನ್ನು  ದೆಹಲಿ ಪೊಲೀಸ್ ಕಮೀಶನರ್ ಆಗಿ ಸರ್ಕಾರ ನೇಮಕ ಮಾಡಿದೆ. ಇಂದು (ಜುಲೈ 28) ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಎಸ್. ಎಸ್. ದೇಸ್ವಾಲ್ ಅವರಿಗೆ ನಿಯಮಿತ ನೇಮಕಾತಿ ಆಗುವವರೆಗೂ ಬಿ. ಎಸ್. ಎಫ್. ನ ಹೆಚ್ಚುವರಿ ಉಸ್ತುವಾರಿ ಅಸ್ಥಾನಾ ಅವರೇ ನೋಡಿಕೊಳ್ಳಲಿದ್ದಾರೆ.

ಜೂನ್ 30 ರಂದು ದೆಹಲಿ ಪೊಲೀಸ್ ಕಮೀಶನರ್ ಆಗಿದ್ದ ಎಸ್.​ ಎನ್. ಶ್ರೀವಾಸ್ತವ ಅವರು ನಿವೃತ್ತರಾದ ನಂತರ ದೆಹಲಿ ಪೊಲೀಸ್​ನ ಹೆಚ್ಚುವರಿ ಹೊಣೆಗಾರಿಕೆಯನ್ನು ಬಾಲಾಜಿ ಶ್ರೀವಾಸ್ತವ ಅವರಿಗೆ ವಹಿಸಲಾಗಿದೆಯಾದರೂ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೆಹಲಿ ಪೊಲೀಸ್​ ವ್ಯವಸ್ಥೆಯಲ್ಲಿ ಸುಧಾರಣೆ ತಂದು ಅದನ್ನು ಮತ್ತಷ್ಟು ವೃತ್ತಿಪರ ಮತ್ತು ಸ್ಪಂದನಾಶೀಲವನ್ನಾಗಿಸುವ ಇಚ್ಛೆ ಇಟ್ಟುಕೊಂಡಿರುವುದರಿಂದ ರಾಕೇಶ್ ಅಸ್ಥಾನಾ ಅವರನ್ನು ನೇಮಕ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ .

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss