CINE NEWS | ರಾಖಿ ನನ್ನ ಹೆಂಡತಿ, ಕಡೆಗೂ ಒಪ್ಪಿಕೊಂಡ ಆದಿಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಖಿ ಸಾವಂತ್ ಹಾಗೂ ಆದಿಲ್ ಕುಟುಂಬದ ವಿಷಯ ಬೀದಿಗೆ ಬಿದ್ದು ತಿಂಗಳುಗಳೇ ಕಳೆದಿದೆ.
ಇಷ್ಟಪಟ್ಟು ಮೈಸೂರು ಮೂಲದ ಆದಿಲ್‌ನನ್ನು ರಾಖಿ ಮದುವೆಯಾಗಿದ್ದು, ಫಾತಿಮಾ ಆಗಿಯೂ ಬದಲಾಗಿದ್ದರು. ರಾಖಿ-ಆದಿಲ್ ಮದುವೆ ಫೋಟೊಗಳು ಎಲ್ಲೆಡೆ ವೈರಲ್ ಆಗಿದ್ದವು.

ಆದರೆ ಆದಿಲ್ ನಮಗೆ ಮದುವೆಯೇ ಆಗಿಲ್ಲ ಎಂದು ಹೇಳಿಕೊಂಡಿದ್ದರು. ಅದಕ್ಕೆ ರಾಖಿ ಮನನೊಂದು ಮೀಡಿಯಾ ಮುಂದೆ ತಮ್ಮ ಕಷ್ಟ ಹೇಳಿಕೊಂಡಿದ್ದರು. ಇದೀಗ ಇಬ್ಬರ ಜಗಳ ಸುಖಾಂತ್ಯಗೊಂಡಿದ್ದು, ರಾಖಿ ನನ್ನ ಪತ್ನಿ ಎಂದು ಆದಿಲ್ ಒಪ್ಪಿಕೊಂಡಿದ್ದಾರೆ. ನಾವಿಬ್ಬರೂ ಈಗ ಒಟ್ಟಿಗೇ ಇದ್ದೇವೆ, ಸಂತೋಷವಾಗಿದ್ದೇವೆ ಎಂದು ಆದಿಲ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!