ರಕ್ಷಾ ಬಂಧನ ಪವಿತ್ರ ಸಹೋದರ ಸಹೋದರಿಯರ ಹಬ್ಬ: ಹಳೆ ನೆನಪುಗಳನ್ನು ತೆರೆದಿಟ್ಟ ರಾಹುಲ್ ಗಾಂಧಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಂದು ಎಲ್ಲಡೆ ಅಣ್ಣ ತಿಂಗಿಯರ ಸಂಬಂಧ ಗಟ್ಟಿಗೊಳಿಸುವ ರಕ್ಷಾ ಬಂಧನ ಹಬ್ಬ. ಈ ರಾಖಿ ಹಬ್ಬಕ್ಕೆ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಶುಭಕೋರಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ರಕ್ಷಾ ಬಂಧನ ಪವಿತ್ರ ಸಹೋದರ ಸಹೋದರಿಯರ ಹಬ್ಬ ಎಂದು ಬಣ್ಣಿಸಿದ್ದಾರೆ. ಪ್ರಿಯಾಂಕಾ ಗಾಂಧಿ ವಾದ್ರಾ ಜೊತೆಗಿನ ರಾಖಿ ಹಬ್ಬದ ದಿನಗಳು, ಮಾಜಿ ಪ್ರಧಾನಿ ಹಾಗೂ ತಂದೆ ರಾಜೀವ್ ಗಾಂಧಿ, ಅಜ್ಜಿ ಇಂದಿರಾ ಗಾಂಧಿ ಜೊತೆಗಿನ ಕೆಲ ಫೋಟೋಗಳನ್ನು ರಾಹುಲ್ ಗಾಂಧಿ ಹಂಚಿಕೊಂಡಿದ್ದಾರೆ.

ಅಣ್ಮ ತಂಗಿಯರ ಪವಿತ್ರ ಸಂಬಂಧದ ಅತ್ಯಂತ ಸುಂದರ ಹಬ್ಬ ರಕ್ಷಾ ಬಂಧನ. ರಾಖಿ ಹಬ್ಬವನ್ನು ದೇಶಾದ್ಯಂತ ಅತ್ಯಂತ ಗೌರವ ಹಾಗೂ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ರಕ್ಷಾ ಹಬ್ಬದ ಈ ಸಂದರ್ಭದಲ್ಲಿ ಎಲ್ಲಾ ದೇಶವಾಸಿಗಳಿಗೆ ಹೃತ್ಪೂರ್ವಕ ಶುಭಾಶಯ. ದೇಶದಲ್ಲಿನ ಅಣ್ಣ ತಂಗಿಯರ ನಡುವಿನ ಪ್ರೀತಿ ವಿಶ್ವಾಸ ಶಾಶ್ವತವಾಗಿ ಉಳಿಯಲಿ ಎಂದು ರಾಹುಲ್ ಗಾಂಧಿ ಹಾರೈಸಿದ್ದಾರೆ.

ರಾಹುಲ್ ಗಾಂಧಿ ಟ್ವೀಟ್ ನಲ್ಲಿ ಪ್ರಿಯಾಂಕಾ ಗಾಂಧಿ ಜೊತೆಗಿನ ಬಾಲ್ಯದ ಹಾಗೂ ಹಳೇ ಪಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ತಂದೆ ರಾಜೀವ್ ಗಾಂಧಿ, ತಾಯಿ ಸೋನಿಯಾ ಗಾಂಧಿ, ಅಜ್ಜಿ ಇಂದಿರಾ ಗಾಂಧ ಫೋಟೋಗಳು ಇವೆ. ಹಳೇ ನೆನೆಪಗಳನ್ನು ರಾಖಿ ಹಬ್ಬದಂದು ರಾಹುಲ್ ತರೆದಿಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!