ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಲ ದಿನಗಳ ಹಿಂದಷ್ಟೇ ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇಡೀ ಚಿತ್ರತಂಡ ರಶ್ಮಿಕಾ ಪರ ನಿಂತಿತ್ತು.
ಇದೀಗ ಮತ್ತೆ ರಶ್ಮಿಕಾ ಫೋಟೊವನ್ನು ತಿರುಚಲಾಗಿದೆ.
ಈ ಬಗ್ಗೆ ನಟ ರಕ್ಷಿತ್ ಶೆಟ್ಟಿ ಮಾತನಾಡಿದ್ದು, ರಶ್ಮಿಕಾಗೆ ಅಂತಲ್ಲ, ಯಾವುದೇ ನಟಿಗೂ ಈ ರೀತಿ ಆಗಬಾರದು.
ಹೆಣ್ಣುಮಕ್ಕಳ ಫೋಟೊ ಹಾಗೂ ವಿಡಿಯೋಗಳನ್ನು ಈ ರೀತಿ ಬಳಸೋದು ತಪ್ಪು, ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರಕ್ಷಿತ್ ಹೇಳಿದ್ದಾರೆ.