ತಮಿಳಿನತ್ತ ರಕ್ಷಿತ್ ಶೆಟ್ಟಿ: ವಿಜಯ್ ಸಿನಿಮಾದಲ್ಲಿ ಸಿಂಪಲ್‌ ಸ್ಟಾರ್ ಆಕ್ಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಸ್ಯಾಂಡಲ್ ವುಡ್ ನಟ ಅನೇಕ ಹಿಟ್ ಮೂವಿ ನೀಡಿರುವ ಸಿಂಪಲ್‌ ಸ್ಟಾರ್ ನಟ ರಕ್ಷಿತ್ ಶೆಟ್ಟಿ ತಮಿಳು ಸಿನಿಮಾದತ್ತ ಮುಖ ಮಾಡಿದ್ದಾರೆ.
ಸ್ಟಾರ್ ನಿರ್ದೇಶಕ ಲೋಕೇಶ್ ಕನಗರಾಜ್ (Lokesh Kangaraj) ನಿರ್ದೇಶನದ ಮುಂದಿನ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಕೂಡ ಬಣ್ಣ ಹಚ್ಚಲಿದ್ದಾರೆ ಎನ್ನಲಾಗುತ್ತಿದೆ. ದಳಪತಿ ವಿಜಯ್ (Thalapathy Vijay) ನಟನೆಯ ಚಿತ್ರದಲ್ಲಿ ರಕ್ಷಿತ್ ಕೂಡ ಮೇಜರ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ವಿಜಯ್, ತ್ರಿಷಾ ಕೃಷ್ಣನ್, ಕೀರ್ತಿ ಸುರೇಶ್ ಅಭಿನಯದ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಕೂಡ ಇರಲಿದ್ದಾರೆ. ಆದರೆ ಇದೀಗ ಹೊರಬಿದ್ದಿರುವ ಸುದ್ದಿ ಅದೆಷ್ಟರ ಮಟ್ಟಿಗೆ ನಿಜ ಎಂಬುದನ್ನು ಕಾದುನೋಡಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!