ನಟಿ ಶ್ರೀನಿಧಿ ಫೋಟೋಗೆ ರಕ್ಷಿತ್ ಶೆಟ್ಟಿ ರಿಯಾಕ್ಟ್: ‘ಏನ್ ನಡೀತಿದೆ ಶೆಟ್ರೆ’ ಎಂದ ಫ್ಯಾನ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಯಾಂಡಲ್ ವುಡ್‌ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸಪ್ತಸಾಗರದಾಚೆ ಎಲ್ಲೋ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಸದ್ಯ ಕೆಲಸದಲ್ಲಿ ಬ್ಯುಸಿ ಇದ್ದು, ಇದರ ನಡುವೆ ಅವರು ಮಾಡಿದ ಟ್ವೀಟ್ ವೈರಲ್ ಆಗಿದೆ.

ಕೆಜಿಎಫ್ ಸುಂದರಿ ಶ್ರೀನಿಧಿ ಶೆಟ್ಟಿ ಅವರ ಹಾಗೆ ಸುಮ್ಮನೆ ಎಂಬ ಪೋಸ್ಟ್‌ ಮಾಡಿದ್ದೂ, ಇದಕ್ಕೆ ಸಿಂಪಲ್ ಸ್ಟಾರ್ ಮಾಡಿರುವ ಕಾಮೆಂಟ್ ಈಗ ವೈರಲ್ ಆಗಿದೆ.
ಇಬ್ಬರ ಕ್ಯೂಟ್ ಮಾತುಗಳು ಅಭಿಮಾನಿಗಳ ಹೃದಯ ಗೆದ್ದಿದೆ. ಅಷ್ಟೆಯಲ್ಲ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.

ನಟಿ ಶ್ರೀನಿಧಿ ಶೆಟ್ಟಿ ಇತ್ತೀಚೆಗೆ ಒಂದು ಪೋಸ್ಟ್ ಶೇರ್ ಮಾಡಿದ್ದರು. ಪರ್ಪಲ್ ಬಣ್ಣದ ಡ್ರೆಸ್ ಧರಿಸಿದ್ದ ಶ್ರೀನಿಧಿ ಶೆಟ್ಟಿ ಸಿಂಪಲ್ ಲುಕ್‌ನ ಸುಂದರ ಪೋಟೋ ಹಂಚಿಕೊಂಡಿದ್ದರು. ಫೋಟೋಗೆ ‘ಹಾಗೆ ಸುಮ್ಮನೆ’ ಎಂದು ಕ್ಯಾಪ್ಷನ್ ಮಾಡಿದ್ದರು.

ಶ್ರೀನಿಧಿ ಶೆಟ್ಟಿ ಫೋಟೋಗೆ ಸಿಂಪಲ್ ಸ್ಟಾರ್ ಕಾಮೆಂಟ್ ಮಾಡಿದ್ದಾರೆ. ‘ಹೌದಾ ಶೆಟ್ರೆ ಗೊತ್ತಾಯಿತು’ ಎಂದು ತುಳುವಿನಲ್ಲಿ ಹೇಳಿದ್ದಾರೆ. ರಕ್ಷಿತ್ ಕಾಮೆಂಟ್‌ಗೆ ಶ್ರೀನಿಧಿ ಮತ್ತೆ ಪ್ರತಿಕ್ರಿಯೆ ನೀಡಿದ್ದಾರೆ. ‘ಗೊತ್ತಾಯಿತಾ ಶೆಟ್ರೆ, ಯಾರಿಗೂ ಹೇಳಬೇಡಿ ಎಂದು’ ಹೇಳಿದ್ದಾರೆ.

ಇಬ್ಬರ ಈ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಬ್ಬರ ಕಾಮೆಂಟ್‌ಗೆ ಅಭಿಮಾನಿಗಳು ತರಹೇವಾರಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ‘ಏನ್ ನಡೀತಿದೆ ಶೆಟ್ರೆ..’ ಎಂದು ಅಭಿಮಾನಿಯೊಬ್ಬ ಕಾಮೆಂಟ್ ಮಾಡಿದ್ದಾರೆ.
‘ಏನಾದ್ರು ಹೊಸ ಸುದ್ದಿ ಇದಿಯಾ’, ‘ಜೋಡಿ ಚೆನ್ನಾಗಿದೆ’ ಎಂದು ಕಾಮೆಂಟ್ ಮಾಡಿ ಶೆಟ್ರ ಕಾಲೆಳೆಯುತ್ತಿದ್ದಾರೆ.

ರಕ್ಷಿತ್ ಶೆಟ್ಟಿ ಕಾಮೆಂಟ್ ಮಾಡಿರುವುದು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ರಕ್ಷಿತ್ ಜೊತೆ ಶ್ರೀನಿಧಿ ಸಿನಿಮಾ ಮಾಡುತ್ತಿದ್ದಾರಾ ಎನ್ನುವ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!