ಸ್ವಾತಂತ್ರ ಹೋರಾಟದ ಮೇರು ನಾಯಕ ರಾಮ್‌ ಸರಣ್‌ ದಾಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ರಾಮ್‌ ಸರಣ್‌ ದಾಸ್‌ ಭಾರತದ ಸ್ವಾತಂತ್ರ ಹೋರಾಟದ ಮೇರು ನಾಯಕರಲ್ಲೊಬ್ಬರು. ಆದರೂ ಎಲ್ಲಿಯೂ ಅವರ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಿಲ್ಲ.
ಬ್ರಿಟಿಷ್‌ ಸರ್ಕಾರದ ವಿರುದ್ಧ 1915 ರಲ್ಲಿ ನಡೆದ ಮೊದಲ ಲಾಹೋರ್ ಪಿತೂರಿ ಪ್ರಕರಣದಲ್ಲಿ ಅವರು ಶಿಕ್ಷೆಗೊಳಗಾಗಿದ್ದರು. ಜೈಲಿನಿಂದ ಬಿಡುಗಡೆಯಾದ ಬಳಿಕ ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಆರ್ಮಿಯಲ್ಲಿ ಸಕ್ರಿಯರಾದರು. ಸ್ವಾತಂತ್ರ್ಯ ಚಳವಳಿಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಕ್ಕಾಗಿ ಮತ್ತೊಮ್ಮೆ ಬ್ರಿಟೀಷರಿಂದ ಶಿಕ್ಷೆಗೊಳಗಾದರು.
ಅವರೊಬ್ಬ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಮಾತ್ರವಲ್ಲದೆ, ಕವಿಯಾಗಿಯೂ ಪ್ರಸಿದ್ಧಿ ಪಡೆದಿದ್ದರು. ಅವರು ʼಸ್ವಪ್ನಭೂಮಿʼ ಶೀರ್ಷಿಕೆಯಡಿ ಬರೆದ ಕವನ ಸಂಕಲನಕ್ಕೆ ಮಹಾನ್‌ ಕ್ರಾಂತಿಕಾರಿ ಭಗತ್ ಸಿಂಗ್ ಪೀಠಿಕೆ ಬರೆದಿದ್ದು ವಿಶೇಷ. ಮೊದಲ ಲಾಹೋರ್ ಪಿತೂರಿ ಪ್ರಕರಣದಲ್ಲಿ ರಾಮ್‌ ಸರಣ್‌ ದಾಸ್‌ ಅವರಿಗೆ ಶಿಕ್ಷೆಯಾಗಿದ್ದರೆ, ದ್ವಿತೀಯ ಲಾಹೋರ್ ಪಿತೂರಿ ಪ್ರಕರಣದಲ್ಲಿ ಭಗತ್‌ ಸಿಂಗ್‌ ಗಲ್ಲುಶಿಕ್ಷೆಗೆ ಒಳಪಟ್ಟರು.
ಮಲ್ವಿಂದರ್ಜಿತ್ ಸಿಂಗ್ ವಾರೈಚ್ ಎಂಬುವವರು ʼರೆವಲ್ಯೂಷನರಿಸ್ ಇನ್ ಡೈಲಾಗ್: ಲಾಲಾ ರಾಮ್ ಸರನ್ ದಾಸ್ ಮತ್ತು ಶಹೀದ್ ಭಗತ್ ಸಿಂಗ್ ಎಂಬ ಪುಸ್ತಕದಲ್ಲಿ ರಾಮ್‌ ಸರಣ್‌ ಅವರ ಸ್ವಾತಂತ್ರ್ಯ ಹೋರಾಟಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!