CINEMA| ಫ್ಯಾನ್ಸ್‌ ಗೆಟ್‌ ರೆಡಿ: ಬರ್ತಡೇ ದಿನದಂದು ಡಬಲ್‌ ಟ್ರೀಟ್‌ನೊಂದಿಗೆ ಮೆಗಾ ಪವರ್ ಸ್ಟಾರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮಾರ್ಚ್ 27 ರಂದು ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಅಭಿಮಾನಿಗಳು ಅದ್ಧೂರಿ ವ್ಯವಸ್ಥೆ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಗ್ಲೋಬಲ್ ಸ್ಟಾರ್ ಆಗಿ ತಮ್ಮ ಸಾಮರ್ಥ್ಯವನ್ನು ತೋರಿಸಿರುವ ಚರಣ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭ ಹಾರೈಕೆಗಳ ಸುರಿಮಳೆಯಾಗುತ್ತಿದೆ.

ಚರಣ್ ಹುಟ್ಟುಹಬ್ಬ ಆಚರಿಸಲು ಆರ್‌ಸಿ 15 ಚಿತ್ರತಂಡ ಕೂಡ ಭರ್ಜರಿ ಟ್ರೀಟ್ ನೀಡಲು ರೆಡಿಯಾಗಿದೆ. ತಮಿಳಿನ ಸ್ಟಾರ್ ಡೈರೆಕ್ಟರ್ ಶಂಕರ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ಚರಣ್ ಅವರ ವೃತ್ತಿಜೀವನದ 15 ನೇ ಚಿತ್ರವಾಗಿ ಪ್ರತಿಷ್ಠಿತ ಚಿತ್ರವಾಗಲಿದೆ. ಈ ಸಿನಿಮಾದ ಬಗ್ಗೆ ಈಗಾಗಲೇ ಒಂದು ರೇಂಜ್ ನಲ್ಲಿ ಹೈಪ್ ಕ್ರಿಯೇಟ್ ಆಗಿದೆ. ಈ ಸಿನಿಮಾದಿಂದ ಚರಣ್ ಹುಟ್ಟುಹಬ್ಬಕ್ಕೆ ಬ್ಯಾಕ್‌ ಟು ಬ್ಯಾಕ್ ಟ್ರೀಟ್ ಕೊಡಲು ಚಿತ್ರತಂಡ ರೆಡಿಯಾಗಿದೆ.

ಆರ್‌ಸಿ15 ಚಿತ್ರದ ಟೈಟಲ್ ಮತ್ತು ಫಸ್ಟ್ ಲುಕ್ ಪೋಸ್ಟರ್ ಮಾರ್ಚ್ 27 ರಂದು ಬೆಳಗ್ಗೆ 8.19.. ಮಧ್ಯಾಹ್ನ 3.06 ಗಂಟೆಗೆ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಪ್ರಕಟಿಸಿದೆ. ಹೀಗಾಗಿ ಈ ಸಿನಿಮಾದ ಅಪ್‌ಡೇಟ್‌ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಚಿತ್ರದಲ್ಲಿ ಚರಣ್ ಎರಡು ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಿದ್ದರೆ, ಕಿಯಾರಾ ಅಡ್ವಾಣಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಸ್ಟಾರ್ ನಿರ್ಮಾಪಕ ದಿಲ್ ರಾಜು ಅದ್ಧೂರಿ ಬಜೆಟ್ ನಲ್ಲಿ ನಿರ್ಮಿಸುತ್ತಿದ್ದು, ಚಿತ್ರಕ್ಕೆ ಥಮನ್ ಸಂಗೀತ ನೀಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!