ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆ ರಾಮಮಂದಿರ ಉದ್ಘಾಟನಾ ಸಮಾರಂಭವನ್ನು ನಾಚ್ ಗಾನಕ್ಕೆ ಲೋಕಸಭೆ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೋಲಿಸಿದ್ದು, ಮತ್ತೊಂದು ವಿವಾದದಲ್ಲಿ ಕಾರಣವಾಗಿದೆ.
ಹಿಂದುಗಳ ದಶಕಗಳ ಕನಸನ್ನು ನನಸಾಗಿಸಿದ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ 2024ರ ಜನವರಿ 22 ರಂದು ಶ್ರೀರಾಮದೇವರ ಮೂರ್ತಿಯ ಪ್ರಾಣ ಪ್ರತಿಷ್ಠೆ ಸಮಾರಂಭ ಶ್ರದ್ಧಾ ಭಕ್ತಿಯಿಂದ ನೆರವೇರಿತ್ತು. ಆದರೆ, ಕಾಂಗ್ರೆಸ್ ಸೇರಿದಂತೆ ಇಂಡಿಯಾ ಮೈತ್ರಿಕೂಟದ ನಾಯಕರು ಕಾರ್ಯಕ್ರಮಕ್ಕೆ ಗೈರಾಗಿದ್ದರು.
ಪ್ರಾಣ ಪ್ರತಿಷ್ಠೆ ಸಮಾರಂಭದ ನೇತೃತ್ವ ವಹಿಸಿದ್ದ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದ್ದ ರಾಹುಲ್ ಗಾಂಧಿ, ಈಗ ಹರ್ಯಾಣ ಮತ್ತು ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆಗಳು ನಡೆಯುತ್ತಿರುವಾಗ ಪ್ರಚಾರದ ಅಂಗವಾಗಿ ಮಾತನಾಡಿದ್ದು, ಭಾರಿ ವಿವಾದಕ್ಕೀಡಾಗಿದ್ದಾರೆ.
ಅಯೋಧ್ಯೆ ರಾಮಮಂದಿರ ಉದ್ಘಾಟನಾ ಸಮಾರಂಭವು ‘ನಾಚ್ ಗಾನಾ’ (ಹಾಡುಗಳು-ನೃತ್ಯ) ಕಾರ್ಯಕ್ರಮವಾಗಿತ್ತು . ಕರೆಯಬೇಕಿದ್ದವರನ್ನು ಬಿಟ್ಟು ಅಮಿತಾಬ್ ಬಚ್ಚನ್, ಅದಾನಿ ಮತ್ತು ಅಂಬಾನಿಯಂತಹ ದೊಡ್ಡ ಮತ್ತು ಹಣವಿದ್ದ ವ್ಯಕ್ತಿಗಳನ್ನು ಆಹ್ವಾನಿಸಲಾಗಿತ್ತು ಎಂದು ಟೀಕಿಸಿದ್ದು, ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕಾಂಗ್ರೆಸ್ ಪಕ್ಷವು ಪದೇ ಪದೇ ಹಿಂದುಗಳನ್ನು ಅವಮಾನಿಸುತ್ತಿದೆ ಎಂದು ಕಮಲ ಪಕ್ಷದ ನಾಯಕರು ಹೇಳುತ್ತಿದ್ದಾರೆ.
ರಾಮಮಂದಿರ ಸಂಘಟಕರು ಕೆಳವರ್ಗದವರನ್ನು ಏಕೆ ಆಹ್ವಾನಿಸಿಲ್ಲ? ಅನೇಕ ಗಣ್ಯರನ್ನು ಆಹ್ವಾನಿಸಿದ್ದರೂ, ಒಬ್ಬ ಕಾರ್ಮಿಕ, ರೈತ ಅಥವಾ ಕೂಲಿ ಕಾರ್ಮಿಕನನ್ನು ಆಹ್ವಾನಿಸಿರಲಿಲ್ಲ. ಅಲ್ಲಿ ಡ್ಯಾನ್ಸ್ ನಡೆಯುತ್ತಿತ್ತು ಎಂದು ರಾಹುಲ್ ಗಾಂಧಿ ಬಣ್ಣಿಸಿದ್ದು, ಇದೀಗ ಅವರ ಈ ಮಾತುಗಳು ಬಾರಿ ವಿವಾದಕ್ಕೆ ಕಾರಣವಾಗಿವೆ.
Rahul Gandhi shame on you