ಪೆರೋಲ್​ ಮೇಲೆ ಬಿಡುಗಡೆಯಾದ ರಾಮ್​ ರಹೀಮ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್​ಮೀತ್​ ರಾಮ್​ ರಹೀಮ್​ 40 ದಿನಗಳವರೆಗೆ ಪೆರೋಲ್​ ಮೇಲೆ ಜೈಲಿಂದ ಹೊರ ಬಂದಿದ್ದಾರೆ.

ಆಶ್ರಮದ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದ ಆರೋಪ ಹಾಗೂ ಸೌದಾದ ಮ್ಯಾನೇಜನರ್​ ರಣಜೀತ್ ಸಿಂಗ್​ನ ಕೊಲೆ ಕೇಸ್​ನಲ್ಲಿ ಗುರ್​ಮೀತ್​ ರಾಮ್​ ರಹೀಮ್​ಗೆ ಜೈಲು ಶಿಕ್ಷೆಯಾಗಿತ್ತು.

ಪೆರೋಲ್​ ಮೇಲೆ ಬಿಡುವಂತೆ ಕುಟುಂಬಸ್ಥರು ಸುನೈರಾ ಜೈಲಿನ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಇದೀಗ ಪೆರೋಲ್​ ಮೇಲೆ ಹೊರ ಬಂದಿದ್ದಾರೆ.

ಇನ್ನು ಜೈಲಿಂದ ಹೊರ ಬರುತ್ತಿದ್ದಂತೆ ರಾಮ್​ ರಹೀಮ್​ ಬರ್ನವಾದ ಬಾಗ್​ಪತ್​ ಆಶ್ರಮಕ್ಕೆ ತೆರಳಿದ್ದಾರೆ.
2021ರ ಅಕ್ಟೋಬರ್​ನಲ್ಲಿ ರಾಮ್ ರಹೀಂಗೆ ಜೀವಾವಧಿ ಶಿಕ್ಷೆಯಾಗಿದೆ. ಇದಕ್ಕೂ ಮೊದಲು ಅಂದರೆ 2017ರ ಆಗಸ್ಟ್ 28 ರಂದು ಸಿಬಿಐ ನ್ಯಾಯಾಲಯವು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ 10 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!