Monday, August 8, 2022

Latest Posts

ರಾಮನಗರ| ಮಾ.8 ರಿಂದ ಎಚ್. ಐ. ವಿ ಸೋಂಕು ತಡೆಗಟ್ಟಲು ಮನೆ-ಮನೆ ಅಭಿಯಾನ

ಹೊಸ ದಿಗಂತ ವರದಿ, ರಾಮನಗರ:

ಹೆಚ್.ಐ.ವಿ/ಏಡ್ಸ್ ಖಾಯಿಲೆಗೆ ಯಾವುದೇ ಲಸಿಕೆಗಳಿಲ್ಲ. ಹೆಚ್‌ಐವಿ/ಏಡ್ಸ್ ಕುರಿತಾದ ಮಾಹಿತಿ, ಶಿಕ್ಷಣ ಮತ್ತು ಸಂವಹನಗಳ ಮೂಲಕ ಜನಸಾಮಾನ್ಯರಿಗೆ ಜಾಗೃತಿ ನೀಡುವುದು ಹೆಚ್.ಐ.ವಿ ಸೋಂಕಿನ ತಡೆಗೆ ಅತ್ಯುತ್ತಮ ಲಸಿಕೆಯಾಗಬಲ್ಲದು ಎಂಬ ಉದ್ದೇಶದಿಂದ ಕನಕಪುರ ತಾಲ್ಲೂಕಿನಲ್ಲಿ ಮಾರ್ಚ್ 8  ರಿಂದ 2 ದಿನಗಳ ಕಾಲ ಮನೆ-ಮನೆ ಭೇಟಿ ನೀಡಿ ಮಾಹಿತಿ ಅಭಿಯಾನ ನಡೆಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ; ನಿರಂಜನ್ ಅವರು ತಿಳಿಸಿದ್ದಾರೆ.

ಎಚ್ ಐ ವಿ ಸೋಂಕಿನ ತಡೆಗಟ್ಟುವಿಕೆ ಮತ್ತು ನಿಯಂತ್ರಣ, ಸೋಂಕಿತರಿಗೆ ಲಭ್ಯವಿರುವ ಸೇವೆಗಳ ಕುರಿತಾದ ಮಾಹಿತಿಯನ್ನು ಮನೆ ಮನೆಗೆ ತಲುಪಿಸುವುದು. ಹೆಚ್.ಐ.ವಿ ಸೋಂಕಿನ ಸರಿಯಾದ ತಿಳುವಳಿಕೆ ಮತ್ತು ಜ್ಞಾನವನ್ನು ಜನಸಾಮಾನ್ಯರಲ್ಲಿ ಹೆಚ್ಚಿಸುವುದು, ಹೆಚ್.ಐ.ವಿ ಸೋಂಕಿನ ತಡೆ ಮತ್ತು ನಿಯಂತ್ರಣದಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವುದು ಹಾಗೂ ಹೆಚ್ಚು ಹೆಚ್ಚು ಜನರು ಐ.ಸಿ.ಟಿ.ಸಿ ಕೇಂದ್ರಗಳಿಗೆ ಭೇಟಿ ನೀಡಿ ಹೆಚ್.ಐ.ವಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ಪ್ರೇರೆಪಿಸುವುದು. ಹೆಚ್‌ಐವಿ ಸೋಂಕಿತರಿಗೆ  ಲಭ್ಯವಿರುವ ಉಚಿತ ಏ.ಆರ್.ಟಿ ಚಿಕಿತ್ಸೆ ಮತ್ತು ಸಾಮಾಜಿಕ ಸವಲತ್ತುಗಳನ್ನು ಪಡೆಯುವಂತೆ ಪ್ರೇರೆಪಿಸುವುದು.

ಜನ ಸಾಮಾನ್ಯರು ಪ್ರತ್ಯೇಕವಾಗಿ ಮಹಿಳೆಯರು ಮತ್ತು ಯುವ ಜನರಿಗೆ ಸುರಕ್ಷಿತ ಲೈಂಗಿಕ ವರ್ತನೆ ಮತ್ತು ಆರೋಗ್ಯಕರ ಜೀವನ ವಿಧಾನಗಳ ಅಳವಡಿಕೆಗೆ ಪ್ರೇರೇಪಣೆ.ಹೆಚ್.ಐ.ವಿ/ಏಡ್ಸ್ ಸೋಂಕಿತರ ಬಗ್ಗೆ ಇರುವ ಕಳಂಕ ಮತ್ತು ತಾರತಮ್ಯತೆಯನ್ನು ಹೋಗಲಾಡಿಸುವುದು. ಎಲ್ಲಾ ಗರ್ಭಿಣಿಯರು ತಮ್ಮ ಮೊದನೇ ತ್ರೈಮಾಸಿಕದಲ್ಲಿ ಹೆಚ್‌ಐವಿ ಪರೀಕ್ಷೆ ಮಾಡಿಸಿಕೊಂಡು, ಸೋಂಕು ಕಂಡು ಬಂದಲ್ಲಿ ಏ.ಆರ್.ಟಿ ಚಿಕಿತ್ಸೆಯೊಂದಿಗೆ ಸರ್ಕಾರಿ ಆಸ್ಪತ್ರೆಯಲ್ಲಿಯೇ ಹೆರಿಗೆ ಮಾಡಿಸಿಕೊಳ್ಳುವಂತೆ ಪ್ರೇರೆಪಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.

ಕನಕಪುರ ತಾಲ್ಲೂಕಿನಲ್ಲಿ 293 ಆಶಾ ಕಾರ್ಯಕರ್ತೆಯರು 81899 ಮನೆಗಳಿಗೆ ಮಾಹಿತಿಯನ್ನು ತಲುಪಿಸುವ ಗುರಿ ಹೊಂದಲಾಗಿದೆ. ಅಭಿಯಾನದ ಮೇಲ್ವಿಚಾರಣೆಯನ್ನು ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ, ತಾಲೂಕು ಆರೋಗ್ಯ ಅಧಿಕಾರಿಗಳು, ತಾಲೂಕು ಆರೋಗ್ಯ ಶಿಕ್ಷಣ ಅಧಿಕಾರಿಗಳು, ಜಿಲ್ಲಾ ಮೇಲ್ವಿಚಾರಕರು, ಆಪ್ತ ಸಮಾಲೋಚಕರು ಮಾಡಲಿದ್ದಾರೆ.

ಅಭಿಯಾನದಲ್ಲಿ ಮನೆ ಭೇಟಿ ಮಾಡಿ ಕರಪತ್ರ ಹಂಚುವುದು, ಗೋಡೆ ಬರಹ, ಜಾನಪದಜಾಗೃತಿ: ಜಾನಪದ ಕಲಾತಂಡಗಳ ಮೂಲಕ ಹೆಚ್.ಐ.ವಿ/ಏಡ್ಸ್ಕುರಿತುಅರಿವು(ಡೊಳ್ಳುಕುಣಿತ) ಆಟೋಗಳಲ್ಲಿ ನಿರಂತರವಾಗಿ ಶ್ರಾವ್ಯ ಮಾಧ್ಯಮದ ಮೂಲಕ ಪ್ರಚಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು.

ಆಶಾ ಕಾರ್ಯಕರ್ತೆಯರು ಮನೆ ಮನೆ ಭೇಟಿ ನೀಡಿದ ಸಂಧರ್ಭದಲ್ಲಿ ಕರಪತ್ರದೊಂದಿಗೆ ಹೆಚ್‌ಐವಿ/ ಏಡ್ಸ್ ಎಂದರೇನು,  ಹೇಗೆ ಹರಡುತ್ತದೆ, ಹೆಚ್‌ಐವಿ ಸೋಂಕಿನ ಪರೀಕ್ಷೆ ಎಲ್ಲ ಮಾಡಲಾಗುತ್ತದೆ, ಹೆಚ್‌ಐವಿ ಸೋಂಕು ಕಂಡು ಬಂದಲ್ಲಿ ಎಲ್ಲಿಗೆ ಹೋಗಬೇಕು ಹಾಗೂ ಎಲ್ಲಿ ಚಿಕಿತ್ಸೆ ಪಡೆಯಬೇಕು, ಎಆರ್‌ಟಿ ಬಗ್ಗೆ, ಹೆಚ್‌ಐವಿ ಸೋಂಕಿತರಿಗೆ ಸಿಗುವ ಸೇವಾ ಸೌಲಭ್ಯಗಳು/ಸಾಮಾಜಿಕ ಸವಲತ್ತುಗಳು ಬಗ್ಗೆ ತಿಳಿಸಲಿದ್ದಾರೆ. ಸಾರ್ವಜನಿಕರು ಆಶಾ ಕಾರ್ಯಕರ್ತೆಯರಿಗೆ ನಿಖರ ಮಾಹಿತಿ ನೀಡಿ ಸಹಕರಿಸುವುದು.

ಜಿಲ್ಲೆಯಲ್ಲಿ 2015-16 ರಲ್ಲಿ- 179, 2016-17 ರಲ್ಲಿ-157, 2017-18 ರಲ್ಲಿ-192, 2018-19 ರಲ್ಲಿ-186, 2019-20 ರಲ್ಲಿ-1964 ಹಾಗೂ ಏಪ್ರಿಲ್ 2020 ರಿಂದ ಜನವರಿ 2021 ರವರೆಗೆ-116 ಎಚ್.ಐ.ವಿ ಪ್ರಕರಣಗಳು ವರದಿಯಾಗಿದ್ದು, ಜಿಲ್ಲೆಯಲ್ಲಿ ಶೂನ್ಯ ಪ್ರಕರಣವಾಗಿಸುವ ನಿಟ್ಟಿನಿಂದ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮಾ.8 ರಿಂದ ಕನಕಪುರ ತಾಲ್ಲೂಕಿನಲ್ಲಿ ಎಚ್.ಐ.ವಿ ಸೋಂಕು ತಡೆಗಟ್ಟಲು ಮನೆ-ಮನೆ ಅಭಿಯಾನ

ರಾಮನಗರ :ಹೆಚ್.ಐ.ವಿ/ಏಡ್ಸ್ ಖಾಯಿಲೆಗೆ ಯಾವುದೇ ಲಸಿಕೆಗಳಿಲ್ಲ.  ಹೆಚ್‌ಐವಿ/ಏಡ್ಸ್ ಕುರಿತಾದ ಮಾಹಿತಿ, ಶಿಕ್ಷಣ ಮತ್ತು ಸಂವಹನಗಳ ಮೂಲಕ ಜನಸಾಮಾನ್ಯರಿಗೆ ಜಾಗೃತಿ ನೀಡುವುದು ಹೆಚ್.ಐ.ವಿ ಸೋಂಕಿನ ತಡೆಗೆ ಅತ್ಯುತ್ತಮ ಲಸಿಕೆಯಾಗಬಲ್ಲದು ಎಂಬ ಉದ್ದೇಶದಿಂದ ಕನಕಪುರ ತಾಲ್ಲೂಕಿನಲ್ಲಿ ಮಾರ್ಚ್ 8  ರಿಂದ 2 ದಿನಗಳ ಕಾಲ ಮನೆ-ಮನೆ ಭೇಟಿ ನೀಡಿ ಮಾಹಿತಿ ಅಭಿಯಾನ ನಡೆಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ; ನಿರಂಜನ್ ಅವರು ತಿಳಿಸಿದ್ದಾರೆ.

ಎಚ್ ಐ ವಿ ಸೋಂಕಿನ ತಡೆಗಟ್ಟುವಿಕೆ ಮತ್ತು ನಿಯಂತ್ರಣ, ಸೋಂಕಿತರಿಗೆ ಲಭ್ಯವಿರುವ ಸೇವೆಗಳ ಕುರಿತಾದ ಮಾಹಿತಿಯನ್ನು ಮನೆ ಮನೆಗೆ ತಲುಪಿಸುವುದು. ಹೆಚ್.ಐ.ವಿ ಸೋಂಕಿನ ಸರಿಯಾದ ತಿಳುವಳಿಕೆ ಮತ್ತು ಜ್ಞಾನವನ್ನು ಜನಸಾಮಾನ್ಯರಲ್ಲಿ ಹೆಚ್ಚಿಸುವುದು, ಹೆಚ್.ಐ.ವಿ ಸೋಂಕಿನ ತಡೆ ಮತ್ತು ನಿಯಂತ್ರಣದಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವುದು ಹಾಗೂ ಹೆಚ್ಚು ಹೆಚ್ಚು ಜನರು ಐ.ಸಿ.ಟಿ.ಸಿ ಕೇಂದ್ರಗಳಿಗೆ ಭೇಟಿ ನೀಡಿ ಹೆಚ್.ಐ.ವಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ಪ್ರೇರೆಪಿಸುವುದು.

ಹೆಚ್‌ಐವಿ ಸೋಂಕಿತರಿಗೆ  ಲಭ್ಯವಿರುವ ಉಚಿತ ಏ.ಆರ್.ಟಿ ಚಿಕಿತ್ಸೆ ಮತ್ತು ಸಾಮಾಜಿಕ ಸವಲತ್ತುಗಳನ್ನು ಪಡೆಯುವಂತೆ ಪ್ರೇರೆಪಿಸುವುದು.  ಜನ ಸಾಮಾನ್ಯರು ಪ್ರತ್ಯೇಕವಾಗಿ ಮಹಿಳೆಯರು ಮತ್ತು ಯುವ ಜನರಿಗೆ ಸುರಕ್ಷಿತ ಲೈಂಗಿಕ ವರ್ತನೆ ಮತ್ತು ಆರೋಗ್ಯಕರ ಜೀವನ ವಿಧಾನಗಳ ಅಳವಡಿಕೆಗೆ ಪ್ರೇರೇಪಣೆ.ಹೆಚ್.ಐ.ವಿ/ಏಡ್ಸ್ ಸೋಂಕಿತರ ಬಗ್ಗೆ ಇರುವ ಕಳಂಕ ಮತ್ತು ತಾರತಮ್ಯತೆಯನ್ನು ಹೋಗಲಾಡಿಸುವುದು. ಎಲ್ಲಾ ಗರ್ಭಿಣಿಯರು ತಮ್ಮ ಮೊದಲನೇ ತ್ರೈ ಮಾಸಿಕದಲ್ಲಿ ಹೆಚ್‌ಐವಿ ಪರೀಕ್ಷೆ ಮಾಡಿಸಿಕೊಂಡು, ಸೋಂಕು ಕಂಡು ಬಂದಲ್ಲಿ ಏ.ಆರ್.ಟಿ ಚಿಕಿತ್ಸೆಯೊಂದಿಗೆ ಸರ್ಕಾರಿ ಆಸ್ಪತ್ರೆಯಲ್ಲಿಯೇ ಹೆರಿಗೆ ಮಾಡಿಸಿಕೊಳ್ಳುವಂತೆ ಪ್ರೇರೆಪಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.
ಕನಕಪುರ ತಾಲ್ಲೂಕಿನಲ್ಲಿ 293 ಆಶಾ ಕಾರ್ಯಕರ್ತೆಯರು 81899 ಮನೆಗಳಿಗೆ ಮಾಹಿತಿಯನ್ನು ತಲುಪಿಸುವ ಗುರಿ ಹೊಂದಲಾಗಿದೆ. ಅಭಿಯಾನದ ಮೇಲ್ವಿಚಾರಣೆಯನ್ನು ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ, ತಾಲೂಕು ಆರೋಗ್ಯ ಅಧಿಕಾರಿಗಳು, ತಾಲೂಕು ಆರೋಗ್ಯ ಶಿಕ್ಷಣ ಅಧಿಕಾರಿಗಳು, ಜಿಲ್ಲಾ ಮೇಲ್ವಿಚಾರಕರು, ಆಪ್ತ ಸಮಾಲೋಚಕರು ಮಾಡಲಿದ್ದಾರೆ.

ಅಭಿಯಾನದಲ್ಲಿ ಮನೆ ಭೇಟಿ ಮಾಡಿ ಕರಪತ್ರ ಹಂಚುವುದು, ಗೋಡೆ ಬರಹ, ಜಾನಪದಜಾಗೃತಿ: ಜಾನಪದ ಕಲಾತಂಡಗಳ ಮೂಲಕ ಹೆಚ್.ಐ.ವಿ/ಏಡ್ಸ್ಕುರಿತುಅರಿವು(ಡೊಳ್ಳುಕುಣಿತ) ಆಟೋಗಳಲ್ಲಿ ನಿರಂತರವಾಗಿ ಶ್ರಾವ್ಯ ಮಾಧ್ಯಮದ ಮೂಲಕ ಪ್ರಚಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss