Wednesday, August 10, 2022

Latest Posts

ದಾಖಲೆ ಬರೆದ ‘ರಾಮಾಯಣ’ ಸೀರಿಯಲ್​: 999 ಶತಕೋಟಿಗೇರಿದ ವೀಕ್ಷಣಾ ನಿಮಿಷ!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಪೌರಾಣಿಕ ಸೀರಿಯಲ್​ ‘ರಾಮಾಯಣ’ ಮತ್ತು ‘ಮಹಾಭಾರತ’ ಮರು ಪ್ರಸಾರದಿಂದಾಗಿ ಕಳೆದ ವರ್ಷ ದೂರದರ್ಶನ ಬಳಕೆಗೆ ಅತಿದೊಡ್ಡ ಉತ್ತೇಜನ ಸಿಕ್ಕಿದೆ.
ಕಳೆದ ವರ್ಷ ಮಾರ್ಚ್ ಅಂತ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದ ‘ಜನತಾ ಕರ್ಫ್ಯೂ’ ಹೇರಿದ್ದರು, ಈ ವೇಳೆ ಟಿವಿ ವೀಕ್ಷಣೆಯ ಉತ್ತುಂಗಕ್ಕೇರಿದೆ. ಹಳೆಯ ಪೌರಾಣಿಕ ಕ್ಲಾಸಿಕ್‌ಗಳಾದ ರಾಮಾಯಣ ಮತ್ತು ಮಹಾಭಾರತದ ಮರು ಪ್ರಸಾರವು ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ. ರಾಮಾಯಣವು ಈಗ ವಿಶ್ವದಲ್ಲೇ ಹೆಚ್ಚು ವೀಕ್ಷಿಸಿದ ಟಿವಿ ಕಾರ್ಯಕ್ರಮದ ದಾಖಲೆ ಹೊಂದಿದೆ ಎಂದು ಬಾರ್ಕ್ ಸಿಇಒ ಸುನಿಲ್ ಲುಲ್ಲಾ ಹೇಳಿದ್ದಾರೆ.
ಇದರ ಜೊತೆಗೆ ಕ್ಲಾಸಿಕ್ ಧಾರಾವಾಹಿಗಳ ಪ್ರಸಾರವು ದೂರದರ್ಶನಕ್ಕೆ ಸಾಕಷ್ಟು ಜಾಹೀರಾತುದಾರರನ್ನು ಸೆಳೆಯುವಂತೆ ಮಾಡಿತು. 2019ರ ಏಪ್ರಿಲ್ – ಜೂನ್ ತ್ರೈಮಾಸಿಕದಲ್ಲಿ ಪ್ರಸಾರಕರ ಜಾಹೀರಾತು ಎಪಿಸೋಡ್​ ಶೇ 62ರಷ್ಟು ಏರಿಕೆಯಾಗಿದೆ ಎಂದು ಡೇಟಾ ತಿಳಿಸಿದೆ.
ಕರ್ಫ್ಯೂ ಯಿಂದಾಗಿ ಟಿವಿ ವೀಕ್ಷಕರ ಸಂಖ್ಯೆಯು ಅಧಿಕವಾಯಿತು. ಜನವರಿಯಿಂದ ಮಾರ್ಚ್ ಆರಂಭಕ್ಕೆ ಹೋಲಿಸಿದರೆ, ಮಾರ್ಚ್ ಮಧ್ಯದಿಂದ ಜೂನ್ ನಡುವೆ ಶೇ 23ರಷ್ಟು ಏರಿಕೆ ಕಂಡು ಬಂದಿದೆ.
ಪಿಎಂ ಮೋದಿ ಮತ್ತು ಅವರ ಸಂದೇಶ
ಪ್ರಧಾನಿ ಮೋದಿ ಮಾರ್ಚ್ ಅಂತ್ಯದಲ್ಲಿ ಘೋಷಿಸಿದ್ದ ‘ಜನತಾ ಕರ್ಫ್ಯೂ’ ಮತ್ತು ವರ್ಷಪೂರ್ತಿ ಅವರ ಭಾಷಣಗಳು ವೀಕ್ಷಕರ ಸಂಖ್ಯೆ ಹೆಚ್ಚಾಗಲು ನೆರವಾಗಿದೆ ಎಂದು ಬಾರ್ಕ್ ಪ್ರಕಟಣೆಯಲ್ಲಿ ತಿಳಿಸಿದೆ.
2020ರಲ್ಲಿ ಕೋವಿಡ್​-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಭಾರತೀಯರ ದೂರದರ್ಶನ ಬಳಕೆ ಶೇ 9ರಿಂದ 999 ಶತಕೋಟಿಯ ವೀಕ್ಷಣಾ ನಿಮಿಷಗಳಿಗೆ ಏರಿದೆ ಎಂದು ರೇಟಿಂಗ್ ಸಂಸ್ಥೆ ಬಾರ್ಕ್​ ಹೇಳಿದೆ.
2019ರಲ್ಲಿ 3 ಗಂಟೆ 42 ನಿಮಿಷಗಳಿಂದ 2020ರಲ್ಲಿ ಪ್ರತಿ ವೀಕ್ಷಕರು ಕಳೆಯುವ ಸರಾಸರಿ ಸಮಯ 4 ಗಂಟೆ 2 ನಿಮಿಷಗಳಿಗೆ ಏರಿದೆ ಎಂದು ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್) ತಿಳಿಸಿದೆ.
ಟಿವಿ ವೀಕ್ಷಣೆಯ ಅತಿದೊಡ್ಡ ವಿಭಾಗವಾದ ಮನರಂಜನಾ ಚಾನೆಲ್‌ (ಜಿಇಸಿ) ನಿಮಿಷಗಳ ವೀಕ್ಷಣೆಯ ಮೂಲಕ ಶೇ ಒಂಬತ್ತರಷ್ಟು ಗಳಿಕೆ ಕಂಡಿದೆ. ಚಲನಚಿತ್ರ ವೀಕ್ಷಣೆಯು ಶೇ 10ರಷ್ಟು ಹೆಚ್ಚಾಗಿದೆ. ಮಕ್ಕಳ ವೀಕ್ಷಣೆ ಶೇ 27ರಷ್ಟು ಹೆಚ್ಚಳವಾಗಿ ಸಂಗೀತ – ಶೇ 11ರಷ್ಟು ಹಾಗೂ ಕ್ರೀಡೆ – ಶೇ 35ರಷ್ಟು ಕುಸಿತ ಕಂಡಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss