ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದುವೆಯಾದ 11 ವರ್ಷಗಳ ನಂತರ ಕಳೆದ ವರ್ಷವಷ್ಟೇ ರಾಮ್‌ಚರಣ್-ಉಪಾಸನಾ ಹೆಣ್ಣು ಮಗುವನ್ನು ಬರಮಾಡಿಕೊಂಡಿದ್ದಾರೆ.
ಇದೀಗ ಸ್ಟಾರ್ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನುವ ಸುದ್ದಿಗಳು ಹರಿದಾಡಿವೆ. ಈ ಬಗ್ಗೆ ಉಪಾಸನಾ ಮಾತನಾಡಿದ್ದು, ಎಲ್ಲಿ ಹೋದ್ರೂ ಈ ಪ್ರಶ್ನೆ ಎದುರಾಗುತ್ತದೆ.
ಮುಂಚಿನಿಂದಲೂ ನಿಧಾನಕ್ಕೆ ಮಗು ಪಡೆಯಬೇಕು ಅನ್ನೋದು ನಮ್ಮ ಯೋಚನೆ ಆಗಿತ್ತು. ಅದರ ಬಗ್ಗೆ ಯಾವ ಪಶ್ಚಾತ್ತಾಪವೂ ಇಲ್ಲ. ಇದೀಗ ವೈದ್ಯರ ಸಲಹೆ ಪಡೆದು ಎರಡನೇ ಮಗು ಬಗ್ಗೆ ಯೋಚನೆ ಮಾಡ್ತೀನಿ, ಮಕ್ಕಳೆಂದರೆ ನನಗೆ ತುಂಬಾ ಇಷ್ಟ ಎಂದಿದ್ದಾರೆ.