Wednesday, June 29, 2022

Latest Posts

ಕೊರೋನಾ ಲಸಿಕೆ ಪಡೆದ ಸಂಸದ ರಮೇಶ ಜಿಗಜಿಣಗಿ

ದಿಗಂತ ವರದಿ ವಿಜಯಪುರ:

ನಗರದ ದರ್ಗಾ ಜೈಲ್ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಂಸದ ರಮೇಶ ಜಿಗಜಿಣಗಿ ಅವರು ಸೋಮವಾರ ಕೊರೋನಾ ಲಸಿಕೆಯನ್ನು ಪಡೆದರು.

ಲಸಿಕೆ ಪಡೆದು ಈ ಸಂದರ್ಭ ಅವರು ಮಾತನಾಡಿ, ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ ಭಯಬೀತರಾಗದೇ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಆರೋಗ್ಯ ಕಾಪಾಡಿಕೊಳ್ಳಿ ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ, ಹಾಗೆಯೇ 45 ವರ್ಷ ಮೇಲ್ಪಟ್ಟ ಎಲ್ಲ ಅರ್ಹ ನಾಗರಿಕರು ಲಸಿಕೆಯನ್ನು ಪಡೆದುಕೊಂಡು, ದೇಶವನ್ನು ಕೊರೋನಾ ಮುಕ್ತವಾಗಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss