ಮಲೆನಾಡಿನಲ್ಲಿ ಕಾಡುಕೋಣಗಳ ಅಟ್ಟಹಾಸ: ಕಾಡೆಮ್ಮೆ ದಾಳಿಗೆ ರೈತ ಬ*ಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಮಲೆನಾಡಿನ ಭಾಗದಲ್ಲಿ ಇತ್ತೀಚೆಗೆ ಮಿತಿಮೀರುತ್ತಿರುವ ವನ್ಯಜೀವಿಗಳ ಹಾವಳಿ ಸಾರ್ವಜನಿಕರ ನಿದ್ದೆಗೆಡಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಅರಣ್ಯ ವಲಯದ ವ್ಯಾಪ್ತಿಯಲ್ಲಿ ಕಾಡುಕೋಣಗಳ ಉಪಟಳ ಹೆಚ್ಚಾಗಿದ್ದು, ತೋಟ-ಜಮೀನುಗಳಿಗೆ ಹೋಗಲು ಜನರು ಭಯಪಡುವಂತಾಗಿದೆ. ಇದರ ಬೆನ್ನಲ್ಲೇ, ತಾಲೂಕಿನ ದೊನಿಹಡ್ಲು ಗ್ರಾಮದಲ್ಲಿ ಕೃಷಿ ಜಮೀನಿಗೆ ನುಗ್ಗಿದ ಕಾಡೆಮ್ಮೆಯೊಂದು ದಾಳಿ ನಡೆಸಿದ ಪರಿಣಾಮ ರೈತರೊಬ್ಬರು ದುರ್ಮರಣಕ್ಕೀಡಾಗಿದ್ದಾರೆ. ಕೊಪ್ಪ ತಾಲೂಕಿನ ದೊನಿಹಡ್ಲು ಗ್ರಾಮದ ಸ್ಥಳೀಯ ನಿವಾಸಿ ಮಂಜುನಾಥ್ (45) ಮೃತ ದುರ್ದೈವಿ. ಘಟನಾ ವಿವರ: ಬುಧವಾರ ಮಧ್ಯಾಹ್ನ ಮಂಜುನಾಥ್ ತಮ್ಮ ತೋಟದ … Continue reading ಮಲೆನಾಡಿನಲ್ಲಿ ಕಾಡುಕೋಣಗಳ ಅಟ್ಟಹಾಸ: ಕಾಡೆಮ್ಮೆ ದಾಳಿಗೆ ರೈತ ಬ*ಲಿ