ಸ್ಯಾಂಡಲ್‌ವುಡ್‌ಗೆ ರಮ್ಯಾ ರೀ ಎಂಟ್ರಿ, ಸಿನಿಮಾ ಟೈಟಲ್ ರಿವೀಲ್, ಹೀರೋ ಯಾರು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎಲ್ಲರೂ ಅಂದುಕೊಂಡಂತೆಯೇ ಇದೀಗ ಮೋಹಕ ತಾರೆ ರಮ್ಯಾ ಮತ್ತೆ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ತಮ್ಮ ಚಿತ್ರಕ್ಕೆ ನಾವೇ ನಿರ್ಮಾಪಕಿಯಾಗಿದ್ದಾರೆ.

ವಿಜಯದಶಮಿ ದಿನದಂದು ತಮ್ಮ ಚಿತ್ರದ ಹೆಸರು, ಹೀರೋ ಬಗ್ಗೆ ರಮ್ಯಾ ಪೋಸ್ಟ್ ಮಾಡಿದ್ದಾರೆ. ರಮ್ಯಾ ಸಿನಿಮಾ ಹೆಸರು ಸ್ವಾತಿ ಮುತ್ತಿನ ಮಳೆ ಹನಿಯೇ, ಆಪಲ್ ಬಾಕ್ಸ್ ಚಿತ್ರ ನಿರ್ಮಾಣ ಸಂಸ್ಥೆಯಡಿ ರಮ್ಯಾ ಅವರೇ ನಿರ್ಮಿಸುತ್ತಿದ್ದಾರೆ. ರಮ್ಯಾ ಪ್ರೊಡಕ್ಷನ್‌ನಲ್ಲಿ ನಿರ್ಮಾಣವಾಗುತ್ತಿರುವ ಮೊದಲ ಸಿನಿಮಾ ಇದಾಗಿದೆ.

ಗರುಡ ಗಮನ ರಿಷಭ ವಾಹನದ ಮೂಲಕ ಗಮನ ಸೆಳೆದ ರಾಜ್ ಬಿ ಶೆಟ್ಟಿ ಅವರು ಸಿನಿಮಾ ನಿರ್ದೇಶಿಸಲಿದ್ದು, ರಮ್ಯಾ ಜೊತೆ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!