ಹಾಸ್ಟೆಲ್ ಹುಡಗರ ಜತೆ ರಮ್ಯಾ, ಟೀಸರ್ ರಿಲೀಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಬಗ್ಗೆ ಇದೀಗ ಸಾಕಷ್ಟು ಚರ್ಚೆ ಆರಂಭವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ವಿಭಿನ್ನವಾದ ಪ್ರಮೋಷನಲ್ ವಿಡಿಯೋಗಳನ್ನು ಚಿತ್ರತಂಡ ಪೋಸ್ಟ್ ಮಾಡುತ್ತಿದೆ. ಸಿನಿ ದಿಗ್ಗಜರಾದ ಪುನೀತ್ ರಾಜ್‌ಕುಮಾರ್, ರಕ್ಷಿತ್ ಶೆಟ್ಟಿ, ಸುದೀಪ ಅವರೂ ಸಿನಿಮಾಗೆ ಪ್ರೋತ್ಸಾಹ ನೀಡಿ, ಪ್ರಮೋಟ್ ಮಾಡಿದ್ದಾರೆ.

ಇದೀಗ ಚಿತ್ರದ ಪ್ರಚಾರಕ್ಕೆ ರಮ್ಯಾ ಕೈಜೋಡಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ದೊಡ್ಡ ಬ್ರೇಕ್ ನಂತರ ರಮ್ಯಾ ಮತ್ತೆ ಸಕ್ರಿಯವಾಗಿದ್ದು, ಎಲ್ಲ ಸಿನಿಮಾಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಅಂತೆಯೇ ಇಂಟ್ರೆಸ್ಟಿಂಗ್ ಆದ ಪ್ರಮೋಷನಲ್ ವಿಡಿಯೋಗೆ ರಮ್ಯಾ ಜತೆ ಸೇರಿದ್ದು, ಟೀಸರ್ ಬಿಡುಗಡೆಯಾಗಿದೆ. ಇಂದು ಸಂಜೆ ವಿಡಿಯೋ ರಿಲೀಸ್ ಆಗಲಿದೆ.

ಈ ಸಿನಿಮಾ ಕಥೆ ಕೇಳಿ ಪುನೀತ್ ರಾಜ್‌ಕುಮಾರ್ ಫಿದಾ ಆಗಿದ್ದು, ಬೆನ್ನು ತಟ್ಟಿ ಸಿನಿಮಾ ಕಥೆ ಚೆನ್ನಾಗಿದೆ ಎಂದಿದ್ದರು. ಮತ್ತೆ ರಮ್ಯಾರನ್ನು ಆನ್‌ಸ್ಕ್ರೀನ್ ನೋಡಲು ಅಭಿಮಾನಿಗಳು ಕಾತತರಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!