ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಸ್ಟಾರ್ ನಾಯಕ, ನಾಯಕಿ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ಇತ್ತೀಚೆಗಷ್ಟೇ ಮದುವೆಯಾಗಿದ್ದಾರೆ. ರಣಬೀರ್ ಕಪೂರ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮದುವೆಯಾದ ನಂತರ ನಿಮ್ಮ ಜೀವನ ಹೇಗಿದೆ ಎಂಬ ಪ್ರಶ್ನೆಗೆ ನೀಡಿರುವ ಉತ್ತರ ಅಚ್ಚರಿ ಮೂಡಿಸಿದೆ.
ಆಲಿಯಾ ಜೊತೆಗಿನ ಮದುವೆಯ ಬಗ್ಗೆ ಮಾತನಾಡಿರುವ ರಣಬೀರ್, “ಮದುವೆ ನಮ್ಮ ಜೀವನದಲ್ಲಿ ಹೊಸದಾಗಿ ಏನನ್ನೂ ಬದಲಾವಣೆ ಮಾಡಿಲ್ಲ. ಆಲಿಯಾ ಮತ್ತು ನಾನು ಕಳೆದ ಐದು ವರ್ಷಗಳಿಂದ ಜೊತೆಯಾಗಿಯೇ ಇದ್ದೇವೆ. ನಮ್ಮ ಜೀವನದಲ್ಲಿ ನಮ್ಮಿಬ್ಬರ ನಡವಳಿಕೆ ಮತ್ತು ಆಲೋಚನೆಗಳು ಆಗ ಮತ್ತು ಈಗಲೂ ಒಂದೇ ಆಗಿವೆ. ಮದುವೆಯಾದ ಮರುದಿನವೇ ನಾವಿಬ್ಬರು ಸಿನಿಮಾ ಶೂಟಿಂಗ್ಗೆ ಹೋದೆವು. ಬಿಡುವು ಸಿಕ್ಕಾಗ ಎಲ್ಲಾದರೂ ಹೋಗೋಣ ಎಂದರೆ ಇಬ್ಬರಿಗೂ ಸಮಯ ಸಿಗುತ್ತಿಲ್ಲ. ಸದ್ಯ ಆಲಿಯಾ ಹಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಾನು ಅಂತಹ ಪ್ರಯತ್ನಗಳಿಗೆ ಕೈ ಹಾಕುವುದಿಲ್ಲ. ಈಗ ನಾನು ಬೇರೆ ಭಾಷೆಯಲ್ಲಿ ಚಿತ್ರ ಮಾಡಿ ಅಲ್ಲಿ ಆಡಿಷನ್ ನೀಡಲು ನನಗಿಷ್ಟವಿಲ್ಲ ಎಂದಿದ್ದಾರೆ.
ಆಲಿಯಾ ಜೊತೆಗಿನ ಮದುವೆಯ ಬಗ್ಗೆ ರಣಬೀರ್ ಆಡಿದ ಮಾತಿಗೆ ಅಭಿಮಾನಿಗಳು ಮತ್ತು ಪ್ರೇಕ್ಷಕರು ಆಶ್ಚರ್ಯಚಕಿತರಾಗಿದ್ದಾರೆ. ಅವರಿಬ್ಬರ ವೈವಾಹಿಕ ಜೀವನದ ಬಗ್ಗೆ ಹೊಸ ಮತ್ತು ಕುತೂಹಲಕಾರಿಯಾಗಿ ವಿಷಯ ಹೇಳುತ್ತಾರೆ ಎಂದು ಕಾದಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ.