VIRAL VIDEO| ಸೆಲ್ಫಿ ಕೇಳಿದ ಅಭಿಮಾನಿಯೊಬ್ಬರ ಫೋನ್‌ ಎಸೆದ ರಣಬೀರ್ ಕಪೂರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಾಲಿವುಡ್ ಸ್ಟಾರ್ ಹೀರೋ ರಣಬೀರ್ ಕಪೂರ್ ಕೆಲ ತಿಂಗಳ ಹಿಂದೆ ಬ್ರಹ್ಮಾಸ್ತ್ರ ಸಿನಿಮಾ ಮೂಲಕ ತೆರೆಗೆ ಬಂದು ಉತ್ತಮ ಯಶಸ್ಸು ಕಂಡಿದ್ದರು. ಸಾಮಾನ್ಯ ನಟರು ಕಾಣಿಸಿಕೊಂಡರೆ ಜನ ಸೆಲ್ಫಿಗೆ ಮುಗಿಬೀಳುತ್ತಾರೆ. ರಣಬೀರ್ ನಂಥ ಸ್ಟಾರ್ ಹೀರೋ ಕಂಡರೆ ಜನ ಬಿಡುತ್ತಾರೆಯೇ?

ಇತ್ತೀಚೆಗಷ್ಟೇ ರಣಬೀರ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ಅಭಿಮಾನಿಗಳು ಅವರನ್ನು ಸುತ್ತುವರೆದು ಅವರ ಜೊತೆ ಫೋಟೊ, ತೆಗೆದುಕೊಳ್ಳಲು ಮುಗಿಬಿದ್ದರು. ಈ ವೇಳೆ ಅಭಿಮಾನಿಯೊಬ್ಬ ರಣಬೀರ್ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾನೆ. ಫೋಟೋ ಸರಿಯಾಗಿ ಸಿಗದೆ ಮತ್ತೆ ಸೆಲ್ಫಿ ತೆಗೆದುಕೊಂಡಿದ್ದಾನೆ. ಇದರಿಂದ ಕೋಪಗೊಂಡ ರಣಬೀರ್ ಫೋನ್ ತೆಗೆದುಕೊಂಡು ಹಿಂದಕ್ಕೆ ಎಸೆದಿದ್ದು, ಇದನ್ನು ಕಂಡು ಅಲ್ಲಿದ್ದವರೆಲ್ಲ ಆಶ್ಚರ್ಯಚಕಿತರಾದರು.

ಅಭಿಮಾನಿಯೊಬ್ಬ ಫೋನ್ ತೆಗೆದುಕೊಂಡು ರಣಬೀರ್ ಮೇಲೆ ಎಸೆದ ದೃಶ್ಯ ವಿಡಿಯೋಗಳಲ್ಲಿ ದಾಖಲಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಕಾರಣದಿಂದ ಕೆಲವರು ರಣಬೀರ್ ವಿರುದ್ಧ ಟೀಕೆ ಮಾಡುತ್ತಿದ್ದರೆ, ಇನ್ನು ಕೆಲವರು ಫೋಟೋಗಳಿಗಾಗಿ ಮತ್ತೆ ಮತ್ತೆ ಪ್ರಯತ್ನಿಸಿದ್ದು ಅವರದು ಕೂಡ ತಪ್ಪು ಎಂದು ಕಮೆಂಟ್ ಮಾಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!