Sunday, April 18, 2021

Latest Posts

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಪರ್ಸ್ ಕಿತ್ತುಕೊಳ್ಳಲು ಯತ್ನಿಸಿದ ಮಹಿಳೆ: ಮುಂದೇನಾಯ್ತು?

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಸಾಮಾನ್ಯವಾಗಿ ಸೆಲೆಬ್ರಿಟಿಗಳು ಎಲ್ಲೇ ಕಂಡರೂ ಅಭಿಮಾನಿಗಳು ಮುತ್ತಿಕೊಳ್ಳೋದು ಸಾಮಾನ್ಯ. ಅವರ ಜೊತೆ ಒಂದು ಸೆಲ್ಫೀ ಸಿಕ್ಕರೆ ಎಲ್ಲಿಲ್ಲದ ಖುಷಿ. ಅದಕ್ಕಿಂತ ಹೆಚ್ಚು ಇನ್ನೇನನ್ನೂ ಅಭಿಮಾನಿಗಳು ಬಯಸುವುದಿಲ್ಲ. ಆದರೆ ಇಲ್ಲಿ ಒಬ್ಬ ಅಭಿಮಾನಿ ನಟಿಯೊಬ್ಬರ ಪರ್ಸ್‌ನನ್ನೇ ಎಳೆದಿದ್ದಾರೆ.
ಹೌದು, ಬಾಲಿವುಡ್‌ನ ಮೋಸ್ಟ್ ಪಾಪ್ಯುಲರ್ ನಟಿ ದೀಪಿಕಾ ಪಡುಕೋಣೆ ಅವರ ಬ್ಯಾಗ್‌ನನ್ನು ಮಹಿಳೆಯಬ್ಬರು ಎಳೆದುಕೊಳ್ಳಲು ಯತ್ನಿಸಿದ್ದಾರೆ. ಸಡನ್ ಆಗಿ ಅಭಿಮಾನಿಯೊಬ್ಬರು ಈ ರೀತಿ ಮಾಡಿದಾಗ ದೀಪಿಕಾ ಶಾಕ್ ಆಗಿದ್ದಾರೆ. ಆದರೆ ಆ ಮಹಿಳೆಯಿಂದ ಪರ್ಸ್‌ನನ್ನು ಕಿತ್ತುಕೊಂಡಿದ್ದಾರೆ. ನಂತರ ಅಭಿಮಾನಿಗಳ ಮಧ್ಯೆ ಕಾರ್ ಹತ್ತಲೂ ಕಷ್ಟಪಟ್ಟಿದ್ದಾರೆ. ಈ ಮಹಿಳಾ ಅಭಿಮಾನಿ ಅಷ್ಟು ಜನ ಬಾಡಿಗಾರ್ಡ್‌ಗಳ ಮಧ್ಯೆ ಪರ್ಸ್ ಕದಿಯಲು ಬಂದಿದ್ದರಾ? ಅಥವಾ ದೀಪಿಕಾರನ್ನು ಮಾತನಾಡಿಸುವ ಸಲುವಾಗಿ ಹೀಗೆ ಮಾಡಿದ್ದಾರಾ ತಿಳಿದಿಲ್ಲ.

https://www.instagram.com/p/CLuZP_eHkVt/?utm_source=ig_embed&utm_campaign=embed_video_watch_again

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss